
ಫಸ್ಟ್ ಹಾಫ್
ಪತ್ರಿಕೆ-ಸಾಹಿತ್ಯ ಕೃತಿಗಳ ಮೂಲಕ, ಟಿ.ವಿ-ಸಿನೆಮಾ ಮಾಧ್ಯಮಗಳ ಮೂಲಕ ಓದುಗರ-ವೀಕ್ಷಕರ ಪಾಲಿಗೆ ಸದಾ ಅಚ್ಚರಿ-ಹೊಸ ಅನುಭವಗಳನ್ನು ಸೃಷ್ಟಿಸುವ ವಿಸ್ಮಯಗಳ ಸರದಾರ ರವಿ ಬೆಳಗೆರೆ ಅವರಿಗೆ ಐವತ್ತೆರಡರ ಹರೆಯ!
“ಫಸ್ಟ್ ಹಾಫ್…” ಇದು ಬೆಳಗೆರೆಯವರ ಐವತ್ತನೇ ವರ್ಷದ ಸಂಭಾವನಾ ಗ್ರಂಥ. ಬೆಳಗೆರೆ ಅವರ ಸಾಧನೆ-ಸಿದ್ದಿಗಳ ಕುರಿತು ಹೊಗಳುವವರಿಗಿಂತ, ತೆಗಳುವವರಿಗಿಂತ ಸಂಪೂರ್ಣ ಬಿನ್ನವಾಗಿ ಕಂಡವರೆಂದರೆ ಅವರ ಸಹೋದ್ಯೋಗಿಗಳು. ಇವರೆಲ್ಲರ ಅಕ್ಕರೆಯ ಕೊಡುಗೆಯೇ “ಫಸ್ಟ್ ಹಾಫ್”.
“ಫಸ್ಟ್ ಹಾಫ್…” ಹೆಸರನ್ನು ಬದುಕಿನ ಮೊದಲ ಐವತ್ತು ವರ್ಷಗಳಿಂದ ಎಂಬ ಅನ್ನುವ ಅರ್ಥದಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ. ರವಿ ಬೆಳಗೆರೆ ಅವರ ಹುಟ್ಟಿನಿಂದ ಈ ಐವತ್ತು ವರ್ಷಗಳ ಅವಧಿಯ ಸಾಧನೆ ಸಿದ್ದಿಗಳನ್ನು, ಏಳು-ಬೀಳುಗಳ ಚಿತ್ರಣವನ್ನು ಸೆರೆಹಿಡಿಯಲು ಈ ಕೃತಿಯಲ್ಲಿ ಪ್ರಯತ್ನಿಸಿಲಾಗಿದೆ.
ಕೃತಿಯ ವಿವರ:
ಸಂಪಾದಕರು: ಶರತ್ ಕಲ್ಕೋಡ್
ಪರಿಕಲ್ಪನೆ ಮತ್ತು ವಿನ್ಯಾಸ: ರವಿ ಅಜ್ಜೀಪುರ, ವಿಜಯಕುಮಾರ್ ಅಮೀನಗಡ
ಮುಖಪುಟ ಚಿತ್ರ: ಎಸ್.ಜಿ.ನಿವೇದಿತಾ.
ಇಂತಿಪ್ಪ “ಫಸ್ಟ್ ಹಾಫ್…” ಕೃತಿಯ ಕೆಲಪುಟಗಳನ್ನು ಆ ಮೂಲಕ ಬೆಳಗೆರೆಯವರ ಅನುಭವದ ನುಡಿಗಳನ್ನು ಜೊತೆ ಜೊತೆಗೇ ಹಲವು ಅಮೂಲ್ಯ ಭಾವಚಿತ್ರಗಳನ್ನೂ ಸಹಾ ಈ ಬ್ಲಾಗಿನಲ್ಲಿ ಪ್ರಕಟಿಸಲಾಗುತ್ತಿದೆ. ಬ್ಲಾಗಿನ ಸೈಡ್ ಬಾರಿನಲ್ಲಿರುವ ಫಸ್ಟ್ ಹಾಫ್ ಲಿಂಕನ್ನು ಕ್ಲಿಕ್ ಮಾಡುವುದರ ಮೂಲಕ ಪಸ್ಟ್ ಹಾಫ್ ನ ಪರಿಚಯವನ್ನು ನೀವು ಮಾಡಿಕೊಳ್ಳಬಹುದು. ಒಮ್ಮೆ ಭೇಟಿ ಮಾಡಿ ತಮ್ಮ ಅನಿಸಿಕೆ, ಸಲಹೆ ಹಾಗೂ ಅಭಿಪ್ರಾಯಗಳನ್ನು ತಿಳಿಸಿದರೆ ನಾನು ಧನ್ಯ ಹಾಗೂ ನನ್ನ ಪ್ರಯತ್ನ ಸಾರ್ಥಕ.
ಈ ಬ್ಲಾಗಿನ ಸೈಡ್ ಬಾರಿನಲ್ಲಿರುವ ಮೊದಲ ಲಿಂಕನ್ನು ಕ್ಲಿಕ್ ಮಾಡಿ.
-ಭಾಸ್ಕರ್



thanq baskar