ಕೇಳಿ…!

ಇಲ್ಲಿ ನೀವು ಯಾವುದಾದರೂ ಪ್ರಶ್ನೆಯನ್ನು ಕೇಳಬಹುದು. ಪ್ರೀತಿ, ಪ್ರಣಯ, ಸ್ನೇಹ, ದಾಂಪತ್ಯ, ರಾಜಕೀಯ, ಸಿನಿಮಾ, ಸಿನಿಮಾನಟರು, ಯಾವುದೇ ನಿಂಬಂಧನೆಗಳಿಲ್ಲ. ಉತ್ತರಿಸುವವರು ಸ್ವತಃ ಬೆಳಗೆರೆಯವರೇ.

ರವಿ ಬೆಳಗೆರೆಯವರಿಗಿರುವ ಅನನ್ಯವಾದ ಹಾಸ್ಯ ಪ್ರಜ್ಞೆಯನ್ನು ತಿಳಿಯಬೇಕಾದಲ್ಲಿ ಕೇಳಿ..ಯ ಅಂಕಣವನ್ನೊಮ್ಮೆ ಓದಬೇಕು. ಪ್ರಶ್ನೋತ್ತರ ಸರಮಾಲೆಗಳ ಅಂಕಣವೇ ಈ ಕೇಳಿ. ಇಂದಿನ ಹಲವಾರು ಪತ್ರಿಕೆಗಳಲ್ಲಿ ಈ ರೀತಿಯ ಪ್ರಶ್ನೋತ್ತರ ಸರಮಾಲೆಯ ಅಂಕಣಗಳೂ ಬರುತ್ತಿದ್ದರೂ ಎಲ್ಲವೂ ಸಪ್ಪೆ ಸಪ್ಪೆ. ಆದರೆ ಹಾಯ್ ಬೆಂಗಳೂರ್‍! ನ ಕೇಳಿ ಮಾತ್ರ ಇದಕ್ಕೆ ಹೊರತಾಗಿ ಓದುಗರಲ್ಲಿ ಕಚಗುಳಿಯನ್ನು ಇಡುತ್ತಾ ಬರುತ್ತಿದೆ.

ಕೇಳಿ..ಯ ಅಂಗಳದಲ್ಲಿ ರಾಜಕೀಯ ಭ್ರಷ್ಟರು ಇವರ ರಾಜಕೀಯವೆಂಬ ದೊಂಬರಾಟ, ಸಮಯಸಾಧಕ ತನ ಇತ್ಯಾದಿಗಳನ್ನು ಬೆಳಗೆರೆಯವರು ತಮ್ಮ ಉತ್ತರಗಳ ಮೂಲಕ ಫುಟ್ ಬಾಲ್ ನಂತೆ ಆಡುವ ರೀತಿ ಓದಲು ರಸವತ್ತಾಗಿರುತ್ತದೆ.

ಪತ್ರಿಕೆಯ ಕೇಳಿ ಅಂಕಣದ ಹಲವಾರು ಆಯ್ದ ಪ್ರಶ್ನೆಗಳನ್ನು ಇಲ್ಲಿ ಹಂತ ಹಂತವಾಗಿ ಅಂದರೆ ಕೇಳಿ-೧, ಕೇಳಿ-೨… ಈ ರೀತಿ ಪೋಸ್ಟ್ ಮಾಡಲಾಗುತ್ತದೆ. ಕಚಗುಳಿಗೆ ಸಿದ್ದರಾಗಿ..

——————————————————————————————————————–

ಕೇಳಿ-೪

ಪ್ರಶ್ನೆ: ಪ್ರೀತ್ಸಿ ಕೈ ಕೊಡೋದು ಹುಡುಗೀರಾ ಹಾಬೀನಾ?

ಉ: ಇಲ್ಲಪ್ಪ! ಅದು ಪ್ರೊಫೆಷನ್ನು.

ಪ್ರಶ್ನೆ: ಗೌಡರ ಹೆಲಿಕಾಪ್ಟರು  ಧರೆಗೆ ಅಪ್ಪಳಿಸಿದರೆ?

ಉ: ಧರೆ ಮತ್ತು ಕಾಪ್ಟರ್‍-ಎರಡೂ ಡಿವೈಡ್ ಆಗ್ತವೆ!

ಪ್ರಶ್ನೆ: ಚೀನಾ ಪ್ರವಾಸದ ನಂತರ ಯಡ್ಡಿ ಬೇರೆ ಬೇರೆ ದೇಶಗಳಿಗೆ ಹೋಗ್ತಾರಂತಲ್ಲ?

ಉ: ’ಜಾಣ ಮರೀ ಜಪಾನಿಗೆ ಬರ್‍ತೀಯಾ’ ಅಂದ್ಲಂತೆ ಶೋಭಕ್ಕ

ಪ್ರಶ್ನೆ: ಈಗಲೂ ಬದಲಿಸಲಾಗದ ನಿನ್ನ ಕೆಟ್ಟ ಗುಣ ಯಾವುದು?

ಉ: ನೂರು ಸಲ ಮೋಸವಾದರೂ ನೂರ ಒಂದನೇ ಸಲ ನಂಬುವುದು

ಪ್ರಶ್ನೆ: ಗೌಡರು ಬಾಲ್ಯದಲ್ಲಿ ಅಂಥ ತುಂಟರೇನಾಗಿರಲಿಲ್ಲವಂತಲ್ಲ?

ಉ: ’ಅವರು ಹುಟ್ಟಿದ್ದೇ ವಯಸ್ಸಾದ ಮೇಲೆ’ ಎಂಬ ವಾದವೊಂದಿದೆ.

ಪ್ರಶ್ನೆ: ಕಡು ಬಡವನ ಸಾವಿಗೂ, ಪರಮ ಶ್ರೀಮಂತನ ಸಾವಿಗೂ ಏನು ವ್ಯತ್ಯಾಸ?

ಉ: ಇದಕ್ಕೆ ಹಂದಿಜ್ವರವೆಂದೂ, ಅದಕ್ಕೆ H1N1 ಎಂದೂ ಬರೆಯಲಾಗುತ್ತದೆ.

ಪ್ರಶ್ನೆ: ಕುಮಾರಣ್ಣ ಯಾಕೆ ಮತ್ತೆ ಪ್ಯಾಂಟ್ ಹಾಕಲು ಶುರು ಮಾಡಿದ್ದಾರೆ?

ಉ: ರೇವಣ್ಣ ಮೂಗಲ್ಲಿ ಬೆರಳಿಟ್ಟುಕೊಂಡು ಪಂಚೆಗೆ ಕೈ ಒರೆಸಿದನಂತೆ!

ಪ್ರಶ್ನೆ; ಶೋಭಾ ಕರಂದ್ಲಾಜೆಯವರು ಎಲ್ಲ ಫೋಟೋಗಳಲ್ಲೂ ನಗುತ್ತಿರಲು ಕಾರಣ?

ಉ:ಮ್ಯಾನುಫ್ಯಾಕ್ಚರಿಂಗ್ ಡಿಫೆಕ್ಟು!

ಪ್ರಶ್ನೆ:ಪಾಪ, ರಾಧಿಕಾ ಈ ಸಲ ಯಾರಿಗೂ ರಾಖಿ ಕಟ್ಟಲಿಲ್ಲವಂತೆ?

ಉ:ಪೋಸ್ಟಲ್ಲಿ ಕಳುಹಿಸಿದ್ದನ್ನ ಚೆನ್ನಿಗಪ್ಪ ಸೊಂಟಕ್ಕೆ ಕಟ್ಟಿಕೊಂಡು ತಿರುಗುತ್ತಿದ್ದಾನಂತೆ!.

ಪ್ರಶ್ನೆ: ಮೊನ್ನೆ ಮೊನ್ನೆಯಷ್ಟೆ ದೇವೇಗೌಡರು ಮನಬಿಚ್ಚಿ ನಕ್ಕರಂತೆ?

ಉ: ಸದಾನಂದ ಗೌಡರಿಗೆ ಹಂದಿಜ್ವರ ಅಂತ ರೇವಣ್ಣ ನಂಬಿಸಿದ್ದನಂತೆ?

—————————————————————————————————————-

ಕೇಳಿ-೩

ಪ್ರಶ್ನೆ: ಅನಿತಕ್ಕನ್ನ ಮುಖ್ಯಮಂತ್ರಿ ಮಾಡೋವರೆಗೂ ಗೌಡರು ನಿದ್ರಿಸುವುದಿಲ್ಲವಂತೆ?

ಉ: ಹೀಗಾಗಿಯೇ ಆ ಪರಿ ತೂಕಡಿಸೋದು!

ಪ್ರಶ್ನೆ: ದೇವೇಗೌಡರನ್ನು ರಾಜಕೀಯದ ’ಶಕುನಿ’ ಅಂತಾರಲ್ಲ?

ಉ: ಅವಿವೇಕಿಗಳ್ಯಾರೋ ಮಧ್ಯೆ ’ಕು’ ಸೇರಿಸಿದ್ದಾರೆ!

ಪ್ರಶ್ನೆ: ಮುಖ್ಯಮಂತ್ರಿ ಯಡಿಯೂರಪ್ಪ ಯಾಕೆ ಸೂಟ್ ಧರಿಸುವುದಿಲ್ಲ?

ಉ: ಕೃಷ್ಣಯ್ಯ ಶೆಟ್ಟಿ ಥರಾ ಕಾಣ್ತೀರಿ ಅಂತ ಆಡ್ಕೊಂಡು ನಕ್ಕರೆ ಗತಿ?

ಪ್ರಶ್ನೆ: ’ಅಪ್ಪಾ ತಂದೇ, ಬಿಕ್ಷ ನೀಡೀ’ ಅಂತೇಕೆ ಭಿಕ್ಷುಕರು ಕೂಗುವುದಿಲ್ಲ?

ಉ: ಅವನು ಅಡುಗೆ ಮಾಡಿಟ್ಟು ಆಗಲೇ ಹೊರಟು ಬಿಟ್ಟಿರುತ್ತಾನೆ ನೋಡಿ?

ಪ್ರಶ್ನೆ: ದೇವೆಗೌಡರನ್ನು ಉಕ್ಕಿನ ಮನುಷ್ಯ ಅಂದರೆ ನಿಮಗೇನನ್ನಿಸುತ್ತದೆ?

ಉ: ಉಕ್ಕು, ವಜ್ರ, ಹಿತ್ತಾಳೆ ಬೇಕಾದ್ದನ್ನಿ: ಮನುಷ್ಯ ಅಂದರೆ ಮಾತ್ರ ನನ್ನ ತಕರಾರಿದೆ!

ಪ್ರಶ್ನೆ: ದೇವೇಗೌಡರು ಒಮ್ಮೆಯೂ ಯಾಕೆ ವಿಗ್ ಬಳಸಲಿಲ್ಲ?

ಉ: ಚೌರಿಕೂದ್ಲು ತರ್‍ತೀನಿ ಅಂತ ಹೋದ ಚೆನ್ನಿಗ ಪಕ್ಷವನ್ನೇ ಬಿಟ್ಟನಲ್ಲ?

ಪ್ರಶ್ನೆ: ಆಪರೇಷನ್ ಕಮಲ ಮಾಡಿದ್ದಕ್ಕೇ ಯಡ್ಡಿಗೆ ಡಾಕ್ಟರೇಟು ಕೊಟ್ಟರಂತೆ ಹೌದಾ?

ಉ: ನಂಗೆ ’ನೈಟಿ’ಂಗೇಲ್ ಪ್ರಶಸ್ತಿ

ಪ್ರಶ್ನೆ; ಉಗ್ರವಾದಿಗಳನ್ನು ನಮ್ಮ ಬುದ್ದಿ ಜೀವಿಗಳೇಕೆ ಖಂಡಿಸಿಲ್ಲ?

ಉ:ಅವರು ಹಾರಿಸಿದ ಗುಂಡು ಇವರ ಅಂಡಿಗಿನ್ನು ತಾಕಿಲ್ಲ!

ಪ್ರಶ್ನೆ:ನಾವು ಬೆತ್ತಲಾದರೆ ಜಗತ್ತೂ ಬೆತ್ತಲಾದೀತೇ?

ಉ:ಅದನ್ನು ಗಮನದಲ್ಲಿಟ್ಟುಕೊಂಡೇ ಪ್ರತಾಪಸಿಂಹನಿಗೆ ಪಿಂಕ್ ಚೆಡ್ಡಿ ಕೊಡಿಸಲಾಗಿದೆ.

ಪ್ರಶ್ನೆ: ಶೃತಿಯ ಮುಂದಿನ ಸಿನಿಮಾ ಯಾವುದು?

ಉ: ನಿಗಮವು ಎಲ್ಲೋ: ಗಮನವು ಎಲ್ಲೋ!

————————————————————————————————————

ಕೇಳಿ-೨

ಪ್ರಶ್ನೆ: ನಾನು ಹೆಂಡತಿ ಹೇಳಿದ್ದಕ್ಕೆಲ್ಲ ಆಯ್ತು ಅಂತಿರ್ತೀನಿ. ನೀವು?

ಉ: ’ಆಯ್ತು’ ಅನ್ನೋ ತಂಕಾ ಹೇಳ್ತಾನೇ ಇರ್‍ತಾಳೆ!

ಪ್ರಶ್ನೆ: ನಾಲ್ಕು ತಿಂಗಳಿಗೆ ಮುಂಚೇನೇ ಬಾಂಬೆ ಬ್ಲಾಸ್ಟ್ ಬಗ್ಗೆ ಬ್ಲಾಸ್ಟ್ ಬಗ್ಗೆ ಗೌಡರಿಗೆ ಕನಸು ಬಿದ್ದಿತ್ತಂತೆ?

ಉ: ಅದಕ್ಕೇ, ಕಸಬ್ ಸಿಗ್ಹಾಕ್ಕೊಂಡ ಕೂಡಲೇ ಅವರು ’ಕುಮಾರಾ’ ಅಂತ ಚೀರಿದ್ದು!

ಪ್ರಶ್ನೆ: ಚೆಂಡನ್ನು ಕ್ರಿಕೆಟ್ ಬೌಲರ್‍ಗಳು ಅಂಡಿಗೆ ಏಕೆ ತಿಕ್ಕುತ್ತಿರುತ್ತಾರೆ?

ಉ: ಫುಟ್ ಬಾಲ್ ಆಟಗಾರರನ್ನು ಅವರು ಅಣಕಿಸುವುದೇ ಹಾಗೆ.

ಪ್ರಶ್ನೆ: ಬಿಳಿ ಸೂಟ್ ಹಾಕಿಕೊಂಡರೆ ದೇವೇಗೌಡರು ಹೇಗೆ ಕಾಣಬಹುದು?

ಉ: ಸೂಟು ಮಾನನಷ್ಟ ಮೊಕದ್ದಮೆ ಹೂಡಬಹುದು!

ಪ್ರಶ್ನೆ: ಹೆಂಡತಿಗೂ ಹೇಳಲಾಗದ ಸತ್ಯ ಸಂಗತಿ ಯಾವುದು?

ಉ: ದಡ್ಡಾ, ಯಾವ ಸತ್ಯಸಂಗತಿಯನ್ನೂ ಹೇಳಬಾರದವಳೇ ಹೆಂಡತಿ!

ಪ್ರಶ್ನೆ: ಹುಡುಗರ ಹಾಗೇ ಹುಡುಗೀರೂ ಪೋಲಿ ಬೀಳೋದುಂಟೇ?

ಉ: ವಯಸ್ಸಿಗೆ ಬಂದ ಹುಡುಗರು ಅಥವರನ್ನ ’ದಾರಿಗೆ ಬಂದ್ಲು’ ಅಂತಿರ್ತಾರೆ!

ಪ್ರಶ್ನೆ: ಐದು ವರ್ಷದ ಮೇಲ್ಪಟ್ಟವರಿಗೆ ಪೋಲಿಯೋ ಡ್ರಾಪ್ಸ್ ಹಾಕಿದರೆ ಏನಾಗುತ್ತೆ?

ಉ: ಚಿಕ್ಕವನಿದ್ದಾಗಲೇ ಇದನ್ನೆಲ್ಲ ಮುಗಿಸಬಾರದಾಗಿತ್ತಾ ಅಂತ ರೇಗಿದ್ನಂತೆ ಕುಮಾರಣ್ಣ.

ಪ್ರಶ್ನೆ: ಪುಸ್ತಕದಲ್ಲಿ ನವಿಲುಗರಿ ಬದಲು ಕಾಗೆ ಪುಕ್ಕ ಇಟ್ಟುಕೊಂಡ್ರೆ?

ಉ: ರಾಧಿಕಾ…ಅಂತ ಹೋದಾಗ ಚೆನ್ನಿಗಪ್ಪ ತಬ್ಕೊಂಡ ಹಾಗಿರುತ್ತೆ!

ಪ್ರಶ್ನೆ: ನಿನ್ನ ಆತ್ಮಕಥೆಯನ್ನು ನಿರೀಕ್ಷಿಸಬಹುದೆ?

ಉ: ಪರೀಕ್ಷಿಸಿದರೆ ಮಾತ್ರ ಫಜೀತಿ!

ಪ್ರಶ್ನೆ: ಚುನಾವಣೆ ಆದ ಮೇಲೆ ಮಕಾಡೆ ಮಲಗಿದ ಗೌಡರು ಎದ್ದೇ ಇಲ್ಲವಂತೆ?

ಉ: ’ಸ್ಲೀಪಿಂಗ್ ಸ್ಲೀಪಿಂಗ್ ಯಸ್ ಪಾಪ್ಪಾ’ ಅಂತ ರೇವಣ್ಣ ಸುತ್ತ ಕುಣಿಯುತ್ತಿದ್ದಾನಂತೆ?

————————————————————————————————————–

ಕೇಳಿ-೧

ಪ್ರಶ್ನೆ: ದೇವೇಗೌಡರು ಸೊಂಟಕ್ಕೆ ಗಡಿಯಾರ ಕಟ್ಟಿಕೊಂಡಿದ್ದಾರಂತೆ?

ಉ: ತೀರ ಎಡವಿಕೊಂಡು ಬೀಳುವಷ್ಟು ಲೂಸ್ ಆಗಿ ಕಟ್ಟಿಕೋಬಾರದಿತ್ತು.

ಪ್ರಶ್ನೆ: ರಾಧಿಕನ್ನ ರಾಮನಗರ ರಾಣಿ ಮಾಡ್ತೀನಿ ಅಂತ ಭರವಸೆ ಕೊಟ್ಟಿದ್ದಾರಂತೆ?

ಉ: ಕಡೇಪಕ್ಷ ನನ್ನ ಹಾವ್ರಾಣಿ ಮಾಡಿ ಅಂತ ತೇಜು ಹಲುಬಿದಳಂತೆ..

ಪ್ರಶ್ನೆ: ನೆಕ್ಸ್ಟು ಶೃತಿ ನಿನ್ನನ್ನು ಲವ್ ಮಾಡುತ್ತಾಳಂತೆ?

ಉ: ಪಾಪ, ಯಡ್ಡಿ ಈ ವಯಸ್ಸಿನಲ್ಲಿ ಚೇತರಿಸಿಕೊಳ್ತಾರಾ?

ಪ್ರಶ್ನೆ: ಮಾಡಿದವರ ಪಾಪ ಆಡಿದವರಿಗೆ ಅಂದಳಂತೆ ಶೃತಿ?

ಉ: ಪಾಪ ಮಾಡಿಕೊಳ್ಳುವ ಕಾಲ ಮುಗಿದಿದೆ, ಎಳೆಯ ಮುದುಕಿಗೆ.

ಪ್ರಶ್ನೆ: ಮಂಗನ ಕೈಯಲ್ಲಿ “ರಾಜ್” ಮಾಣಿಕ್ಯವಾದರೆ, ರಕ್ಷಿತಾ?

ಉ: ಅವನು ತಿಂದ ಇಂಗು..

ಪ್ರಶ್ನೆ: ಶೃತಿಯ ಮುಖ ಮಸಾಲೆ ದೋಸೆಯಂತೆ ಅರಳಿಕೊಂಡಿದೆಯಲ್ಲಾ?

ಉ: ಚಂದ್ರಾಚಾರಿ ಹಿಟ್ಟು ರುಬ್ಬೋನ ಥರಾ ಕಂಡಾಗಲೇ ಅಂದುಕೊಂಡೆ!

ಪ್ರಶ್ನೆ: ದೇವೇಗೌಡರ ಫ್ಯಾಮಿಲಿಯಲ್ಲಿ ರಾಧಿಕಾಗಿನ್ನೂ ಮೆಂಬರ್‍ ಷಿಪ್ ಸಿಕ್ಕಿಲ್ವಂತೆ?

ಉ: ಕತ್ಲಲ್ಲಿ ಬಂದು ಟೋಕನ್ ತೊಗೊಂಡವ್ಳೆ ಎಂಬುದು ರೇವಣ್ಣನ ಗುಮಾನಿ.

ಪ್ರಶ್ನೆ: ಈ ಸಲ ಗೌಡರು ಪ್ಯಾಂಟ್ ಹಾಕ್ಕೊಂಡು ಓಟು ಕೇಳ್ತಾರಂತೆ?

ಉ: ಮಾವನ ಮನಸ್ಸು ಬದಲಾದ್ರೆ ಮುಡಿ ಕೊಡುಸ್ತೀನಿ ಅಂದಳಂತೆ ರಾಧಿಕಾ!

ಪ್ರಶ್ನೆ: ಇಡೀ ವಾರದಲ್ಲಿ ಅವಳು ಒಂದ್ಸಲಾನೂ ಮುನಿಸಿಕೊಂಡಿಲ್ಲ!

ಉ: ಊರಿಗೋಗಿರಬೌದೂ!

ಪ್ರಶ್ನೆ: ಪ್ರೀತಿಸಿದವಳನ್ನೇ ಮದುವೆಯಾಗಿಬಿಟ್ಟಿದ್ದೀನಿ, ತಪ್ಪಾ?

ಉ: ಒಂದೇ ಆಗಿದ್ದರೆ ಕ್ಷಮಿಸ ಬಹುದಾಗಿತ್ತು: ಎರಡೆರಡು ತಪ್ಪು ಮಾಡಿದ್ದೀಯ.

—————————————————————————————————————–

41 Responses to ಕೇಳಿ…!

 1. Roopa says:

  Respected Ravi,
  sir Iam Roopa sir iam big fan of you But Iam not able to Contact you sir plzz give your Phone No

  • ravibelagere says:

   ಈ ಬ್ಲಾಗ್ ನೊಂದಿಗೆ ನಿಮ್ಮ ಸಂಪರ್ಕ ಜಾರಿಯಲ್ಲಿರಲಿ…ರವಿಬೆಳಗೆರೆಯವರನ್ನು ಭೇಟಿಯಾಗುವ ಹಂಬಲ ನನಗೂ ಕೂಡ….ಆ ಸಮಯಕ್ಕಾಗಿ ಕಾಯೋಣ…ಬ್ಲಾಗಿಗೆ ನಿಮ್ಮ ಭೇಟಿ ನಿರಂತರವಾಗಿರಲಿ…

   • uma says:

    nimma o manase magazine namage sigta illa, elli kelidarunu stop agide anthane heltidare. please ella kade siguva taraha agents fix madi.

 2. Priyanka.S says:

  I am big fan of yours and the command you have over the language.Since you hav great memories and experiences with best of best of Kannada literary giants,I request you to pen down all your thoughts on them.It will indeed be a valuable guide and resource for the future generations.Do consider this humble request

  • ravibelagere says:

   ರವಿ ಬೆಳಗೆರೆ ಅಭಿಮಾನಿಯಾಗಿ: ನಿಮ್ಮ ಆತ್ಮೀಯ ಭಾವದ ಈ ಸಲಹೆಗೆ ಮುಕ್ತ ಮನಸ್ಸಿನ ಸ್ವಾಗತ. ಸಂಪರ್ಕ, ಸಲಹೆ, ಪ್ರಶಂಸ, ಟೀಕೆ, ಪ್ರತಿಕ್ರಿತೆ ನಿತ್ಯ ಜಾರಿಯಲ್ಲಿರಲಿ….

 3. ಸರ್, ಯಾವಾಗ ಅಪ್ಡೇಟ್ ಮಾಡ್ತೀರ, ನಿಮ್ಮ ಬರವಣಿಗೆಗಾಗಿ ಕಾಯುತಿದ್ದೇನೆ,

  ನಿಮ್ಮ ಅಭಿಮಾನಿ,
  ಪ್ರದೀಪ್

  • ravibelagere says:

   ಆತ್ಮೀಯ ಮಿತ್ರ ಪ್ರದೀಪ್,

   ನಿಮ್ಮ ಅಭಿಮಾನವೇ ನಮಗೆ ಸಿಗುವ ಪ್ರೋತ್ಸಾಹ. ಖಂಡಿತ ನಮ್ಮ ಬ್ಲಾಗಿನ ಪ್ರತಿ ಅಂಕಣ, ಪ್ರತೀ ಲಿಂಕ್ ಸಹಾ ಶೀಘ್ರದಲ್ಲೇ ಅಪ್ ಡೇಟ್ ಆಗಲಿದೆ. ಭೇಟಿ ಜಾರಿಯಲ್ಲಿರಲಿ..

 4. Vishy says:

  This week’s Hi was good. Was very disappointed after reading Raj – The Showman’s article. But this week’s khaasbaat was excellent. And am waiting for your next two books – on aghori’s and on chambal. Hope they are on the way.

 5. Hemalatha says:

  ಆತ್ಮೀಯ ರವಿ ಬೆಳಗೆರೆ ಯವರಿಗೆ,

  ಸೃಶ್ಟಿ ೨೦ ರಿ೦ದ ೭೧೪ ರವರೆಗು ನಿರ೦ತರವಾಗಿ ನಿಮ್ಮ ಪತ್ರಿಕೆಯ ಓದುಗಳು ನಾನು. ಬಹುಶಃ ಇಷ್ಟು ಸುಧೀರ್ಘ ಸಮಯದಲ್ಲಿ ಕೆಲವೇ ಜನ ಓದುಗರ ಸಾಲಿನಲ್ಲಿ ನಾನು ಇರಿಬಹುದು ಎ೦ಬ ಹೆಮ್ಮೆ ನನಗಿದೆ. ಬಹಳ ಸ೦ಕೊಚದ ಸ್ವಭಾವದವಳಾದ ನಾನು ನಿಮ್ಮ ಪತ್ರಿಕೆಗೆ ಬರೆಯಲಾಗಲಿಲ್ಲ. ಆದರೆ ನನ್ನ ಸ೦ತೋಷ, ದುಃಖ ಎಲ್ಲದರಲ್ಲು ಬರವಣಗೆಯ ಮೂಲಕ ನನ್ನೊಡನೆ ಇದ್ದೀರಾ. ಈ ಬ್ಲಾಗಿನೊ೦ದಿಗೆ ನಿಮ್ಮ ಸ೦ಪರ್ಕ ನಿರ೦ತರವಾಗಿರಲಿ.

 6. Madakari says:

  Hi Ravi,

  Y cant u publish a book for the content of 3rd & 4th pages of Hi!page after bottom item, the contents are really good!!!

 7. Madakari says:

  Hi Ravi,

  I just lsten to one of ur favorite urdu song in you tube “mehfil – E – Khas” the song was amazing,after listening to the song, I came to know that u have very good taste in listing songs also, I heard from many that tey have habbit of listing songs , but the song they listen will be really bad, I request u to pls list the songs u like or upload more in u tube ,if u list i can purchase them too!!if u let me know were can i get them

 8. Madakari says:

  Hi Ravi,

  I read Hi! for this week, the explaination of ur first published book “Daari” is really good, Bottom Item, lav lavke,the content of 3rd & 4th page, article by a doctor above diabetes & article by aloor chandreshekar regarding olden days relation B/W indian kings & europen countries is really good!! Kudos to u to maintain the qulity of Hi!!for such a long years!

 9. Madakari says:

  Mainly I forgot to thanks “Bhaskar” for providing us an stage to discuss about “Ravi’s” Work

  Internet is the only one media which can i interact very well with ppl, once again thx for bhaskar, & ravi did a good job letting us know about this blog, by publishing in Hai!

  “Jai Ho Ravi” “Jai Ho Bhaskar”

 10. Pramod kulkarni says:

  hi ravi belegere anna, I am Pramod From Gangavath i am studying in jouranlsim and Mass Communication in Gulbarga university. ur every actvities is very well. all the best.

 11. Rajendra says:

  ravibelegere i like your writting because i am also seme profesation. but ONDE ONDU AASE SAYODRALLI ONDU DINAVADRU NIMMA JOTE WORK MADBEKU ANNODU,
  adre nimma bagge nnage besrvadglella neeve nanage spurthi

 12. Rajendra says:

  ravibelegere i like your writting because i am also seme profesation. but ONDE ONDU AASE SAYODRALLI ONDU DINAVADRU NIMMA JOTE WORK MADBEKU ANNODU,
  adre nanage besrvadglella neeve nanage spurthi

 13. tanu says:

  very nice answers…superb ravi sir

 14. tarale says:

  fantastic…

 15. mahesh says:

  navu nimman friend taraha nodtivi navu yaru jasti odidavaralla just pass PUC namage nimm paper and oh manse andre tumba acchu mechu adare onda alalu kargil nedita iro sandharbhadalli iddanta paper ig illa (sorry).
  mukhymantri i love u yavag bidugade madtira?
  nivu yav chitradalli natista idiri varsadar cinima tarha matte cinima madi wish you good luck for what u do.

 16. Parmesh says:

  ರಾಧಿಕಾ ಪುನಃ ಮದುವೆ ಆಗ್ತಾಳಾಂತಾ?

 17. Jay says:

  Hello Ravi sir

  This was regarding Heli hogu karana..
  This is really a Masterpiece,
  I love all the characters in this novel..
  Himavantha his love, trust
  Prarthana her innocence
  Urumila her maturity
  Deb’s style every thing are amazing…
  But I had a question to you..
  Dont you feel this is death of a true love..
  Himavantha dedicated his entire life for Prarthana..
  But what was the result???

  He wanted to build a future for her
  But She made his future totally blind..

  He trusted her to maximum extent..
  But she killed his trust

  He did not even dream bad about her in his whole life time..
  But she took advantage of this and played with his feelings..

  Does this mean Love is a business which requires good looks and money as investment..

  Please reply

 18. Maxim J. says:

  Nice. I’ll use that at my web-page

 19. SIDDIK PASHA says:

  siddik pasha.9743360424

 20. krishna singh says:

  hai how yeu ravi sir

 21. Panchakshari says:

  Hi Ravi,
  We all are desperately waiting for our magazine “Oh Manase”.
  i don’t no why you have stopped that, but why need it Ravi.(You should write till as much as you can)
  Till you published 1st edition. it was yours, but after its ours, that much hope we have on that!!!!
  Still i used to read “Oh manase” initial editions not bcos i have enough time. just to convince my “manassu” that 1 fine day Ravi will definitely write antha…..

 22. sanjana says:

  sir i m the big fan of u. i love u sir.nanu tumba kastadalli idaga nim book odi jeevandalli munde bandidini sir

 23. prashant says:

  sir,,,,,,
  nimma baravanigege naanu mechuge vektha padisthini, nanage kelavu manasika thondare inda naanu mana nondidene, i hope nivu nanna e thalamala vannu artha madkolthira antha e mail kalstha idini, nivu kodo pariharagale ega nange medicine anisuthide, so dayavittu nanna kelavu prashnege utharisi,…….?
  yaake namma manasu kelavu sari namma mathu kelodilla…..?
  yaake naavu yavudarinda beda antha hogthivo mathe mathe ade nammage gothilda hage adaralle involve agthivi……….?
  yaak namma manasu ishtondu chanchalla……….?
  manasika vedane inda hege horgade barodu…….?
  itharahada eshto vichitra prashane nange kaduthide dayavitto nanage uthharisi plzzzzzzzzzzzzzzzz……….: -(

  inthi nondava
  prashant

 24. sandesh says:

  hi,

  i just want to ask u ravi . u r words are very motivative and i also devotie of u but when i found u r school near to that Bar i feel really very much angry on u . bcos y u didt removed that bar antha . my number is 7795367699. pls call me

 25. smkotresh says:

  Hello Ravi!

  As you are such a popular and reputed person, you should not limit to some persons and you should be like universal, but you have shown your smallness by writing kamarajamarga by targetting the person, why you did thi?

 26. smkotresh says:

  I have a comment as above

 27. sona says:

  sir ….. nim baravanige ista aguthe,,,,,,, but madhyadalli nim bagge baredre bejeru,,,,,,,,, aste,,,,,,sorry,,,,,,,

 28. jabiulla says:

  pratap simha ya ke kothi han adutane ?

 29. Baby says:

  Sir, Nim baravanige thumba yochane maduvanthadu. Nim yavudadarodu book,pathrike, sanna thunuku yavude agirali nananthu oduthidare time hogode gothagalla. Nan yesto novanna marethu, thruptigolluthene. Thank you Ravi… God bless U….

 30. Sir,,,,, how to give a strong feedback to a girl who broken my heart by making a fake promices….. even though she is broken my tution classes as she is my partner that time…… i left my teaching job in my town also as i am not able to concentrate …. please suggest me sir,… my parents are worrieng about my carrier….

 31. bharathi says:

  enanne adru neravage matado baravanege yalli nerupeso nem guna bharaha nang thumba esta sir nemna nan sayod olage ond sala sayodara olage direct ag meet mad nan manasena nov galanna elkobeku plz

 32. ashwini says:

  sir namaskar,
  nana hesaru ashwini kambar anta nana gokak adavalu, nanu nima yala lekhan galanu odidene, adarinda nanali bahalastu badalavane galu gavive,
  adre enu manasi nali eruva tiyada prashne ge uttar sigutila nima hosa lekhan kaki kayutidene,jivana dali tumaba nondide adru suludila mate mate yadu nitu mude hogalu prayatanisuttide adke nima ashiravada beku,sir nima cd galu siguttila plz belgaum dist ge sigo hage madire

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: