ಪುಸ್ತಕಗಳು

ವಿಬೆಳಗೆರೆಯವರು ಬರೆದಿರುವಂತಹ ಪ್ರತಿ ಪುಸ್ತಕದ ಹಿಂದೆ ಅವರ ಅವಿರತವಾದ ಶ್ರಮ ಹಾಗೂ ಅಛಲವಾದ ಶ್ರದ್ದೆಯಿರುತ್ತದೆ. ತನ್ನ ಸಂಪಾದನೆಯಲ್ಲಿ ಇಂತಿಷ್ಟು ಹಣವನ್ನು ಪುಸ್ತಕಕ್ಕಾಗಿ ವ್ಯಯ ಮಾಡುವ ಓದುಗನಿಗೆ ಯಾವುದೇ ಕಾರಣಕ್ಕೂ ನಷ್ಟ ಉಂಟಾಗಬಾರದು ಎಂಬುದೇ ಇವರ ಉದ್ದೇಶ. ಕಾದಂಬರಿ, ಅನುವಾದಕೃತಿಗಳು, ಪ್ರವಾಸಲೇಖನ ಹೀಗೆ ಹಲವಾರು ಪ್ರಕಾರಗಳಲ್ಲಿ ಇವರ ಬರಹ ರೂಪು ಕಂಡುಕೊಂಡಿದೆ. ರವಿಬೆಳಗೆರೆಯವರ ಯಾವುದೇ ರೀತಿಯ ಪುಸ್ತಕವಾಗಲೀ ಅವರು ವಿಷಯವನ್ನು ಓದುಗರಿಗೆ ಪ್ರಸ್ತಾಪಿಸುವ ಶೈಲಿ, ಪಾತ್ರಗಳಲ್ಲಿನ ತೂಕ, ಸನ್ನಿವೇಶಗಳಲ್ಲಿನ ಸ್ವಾಭಾವಿಕತೆ, ಅನಿರೀಕ್ಷಿತ ತಿರುವುಗಳು  ಓದುಗರನ್ನು ಒಂದು ಬೇರೆಯದೇ ಪ್ರಪಂಚಕ್ಕೆ ಕೊಂಡೊಯ್ಯುತ್ತವೆ. ಒಂದು ಪುಸ್ತಕವನ್ನು ಬರೆಯಲು ತೀರ್ಮಾನಿಸಿದಾಗಿನಿಂದ ಅದನ್ನು ಅಂತಿಮವಾಗಿ ಮುದ್ರಣಕ್ಕೆ ಕಳುಹಿಸಿ ಬಿಡುಗಡೆ ಮಾಡುವವರೆಗೂ ರವಿ ಬೆಳಗೆರೆಯವರು ಅದನ್ನು ಒಂದು ತಪಸ್ಸಿನ ರೀತಿ ಮಾಡಿರುತ್ತಾರೆ.  ಬಿಡುಗಡೆಯಾದ ಕೂಡಲೇ ಮತ್ತೊಂದು ತಪಸ್ಸಿಗೆ ಕೂಡುತ್ತಾರೆ.  ಒಮ್ಮೆ ಇವರ ಯಾವುದೇ ಪುಸ್ತಕವನ್ನು ಓದಲು ಕೈಗೆತ್ತಿಕೊಂಡರೆ ಸಂಪೂರ್ಣ ಓದಿ ಮುಗಿಸದ ಹೊರತು ಓದುಗರ ಮನಸ್ಸು ಪುಸ್ತಕದ ವಿಷಯ ಅದರಲ್ಲಿನ ಪಾತ್ರಗಳು ಸನ್ನಿವೇಶಗಳಲ್ಲಿ ಗಿರಕಿ ಹೊಡೆಯುತ್ತಿರುತ್ತದೆ. ಒಮ್ಮೆ ಇದರ ಸವಿ ಸವಿಯಿರಿ ನಿಮಗೇ ತಿಳಿಯುತ್ತದೆ. ಅಕ್ಷರದ ಜಾತ್ರೆಯಲ್ಲಿ ನೀವೂ ಪಾಲ್ಗೊಳ್ಳಿ.

ರವಿಬೆಳಗೆರೆ ಯವರು ಬರೆದಿರುವಂತಹ ಪುಸ್ತಕಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ಪ್ರಕಟಿಸಲಾಗುತ್ತದೆ. ಪ್ರತಿ ಪುಸ್ತಕವೂ ತನ್ನಲ್ಲಿ ಒಳಗೊಂಡ ವಿಷಯದ ಬಗ್ಗೆ ರವಿಬೆಳಗೆರೆಯವರೇ ಸಂಕ್ಷಿಪ್ತವಾಗಿ ವಿವರವನ್ನು ನೀಡಿರುತ್ತಾರೆ.

ಪಾಪಿಗಳ ಲೋಕದಲ್ಲಿ


ಮೇಜರ‍್ ಸಂದೀಪ್ ಹತ್ಯೆ


ಹೇಳಿಹೋಗು ಕಾರಣ


ಮುಸ್ಲಿಂ


ನೀನಾಪಾಕಿಸ್ತಾನ


ಚಲಂ


ಪುಸ್ತಕಗಳನ್ನು ಕೊಂಡುಕೊಳ್ಳಲು, ಅವುಗಳ ಬೆಲೆ ದೊರಕುವ ವಿಳಾಸ ಇತ್ಯಾದಿ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.


—————————————————————————————————————————————–

ಪಾಪಿಗಳ ಲೋಕದಲ್ಲಿ

ಪಾಪಿಗಳ ಲೋಕದಲ್ಲಿ

ಶಿವಾಜಿನಗರದ ಗಲ್ಲಿಯಿಂದ ಆಫ್ರಿಕಾ ಖಂಡದ ತನಕ!

’ಪಾಪಿಗಳ ಲೋಕದಲ್ಲಿ’ ಒಂದು ಮಹಾನ್ ಸಾಹಿತ್ಯ ಅಂತಾಗಲೀ, ಅಗಾಧಕೃತಿ ಅಂತಾಗಲೀ, ಪತ್ರಿಕೋದ್ಯಮದ ಕೌತುಕ ಅಂತಾಗಲೀ ನಾನು ಭಾವಿಸಿಲ್ಲ. ನನ್ನಿಂದ ’ಪಾಪಿಗಳ ಲೋಕ’ ಅಂತ ಕರೆಸಿಕೊಂಡ ಬೆಂಗಳೂರಿನ ಅಂಡರ್‍ ವಲ್ಡ್ ಗೆ ನಾನು ಕೈಯಿಟ್ಟಿದ್ದೊಂದು ಆಕಸ್ಮಿಕ. ಆವತ್ತು ’ಕರ್ಮವೀರ’ ಪತ್ರಿಕೆಯನ್ನು ಪ್ರಿಂಟಿಗೆ ಕಳಿಸಿ ಸುಸ್ತಾಗಿ ಬಂದು ಪ್ರೆಸ್ ಕ್ಲಬ್ ನಲ್ಲಿ ಸಾಯಂಕಾಲದ ಸಮಾರಾಧನೆಗೆ ಅಂತ ಕುಳಿತಿದ್ದೆ. ಅಷ್ಟರಲ್ಲಿ ಅಲ್ಲಿಗೆ ಬಂದವನು ’ಸಾಲಾರ್‍’ ಪತ್ರಿಕೆಯ ವರದಿಗಾರ ಮಿತ್ರ ಸಿದ್ದೀಕಿ ಆಲ್ದೂರಿ. ನನ್ನ-ಸಿದ್ದೀಕಿಯ ಗೆಳೆತನ ಹಳೆಯದು. ಅದಕ್ಕೆ ಉರ್ದು ಕಾರಣ. ನೇರವಂತಿಕೆ ಕಾರಣ. ಬೇರೆ ಯಾವ ಚಟಗಳೂ ಇಲ್ಲದ ಸಿದ್ದೀಕಿ ಅದ್ಯಾಕಾದರೂ ಪತ್ರಿಕೋದ್ಯಮದಂತಹ ವೃತ್ತಿಯಲ್ಲಿದ್ದಾನೋ ಅಲ್ಲಾಹುವೇ ಬಲ್ಲ. ಹೀಗೇ ಮಾತನಾಡುತ್ತಾ ಕುಳಿತಿದ್ದಾಗ ಶಿವಾಜಿನಗರದ ರಾಕ್ಷಸ ಗಾತ್ರದ ರೌಡಿ ಕೋಳಿ ಫಯಾಜ್ ನ ಬಗ್ಗೆ ಮಾತು ಬಂತು.  “ಭೇಟಿ ಮಾಡ್ತೀಯಾ?” ಫಕ್ಕನೆ ಕೇಳಿಬಿಟ್ಟ ಆಲ್ದೂರಿ.

ಅದರ ಮುಂದಿನ ಶುಕ್ರವಾರದ ಶಿವಾಜಿನಗರದ ಮಸೀದಿಯಲ್ಲಿ ಸಾಯಂಕಾಲದ ನಮಾಜಿಗೆ ಮುಂಚಿನ ’ಅಜಾನ್’ ಕೂಗುವ ಹೊತ್ತಿಗೆ ನಾನು ಕೋಳಿ ಫಯಾಜ್ನ ಹಕ್ಕಿಯಂಗಡಿಯಲ್ಲಿ ಕುಳಿತಿದ್ದೆ. ಅಲ್ಲಿಂದ ಶುರುವಾದ ನನ್ನ ಭೂಗತ ಅಲೆದಾಟ ನನ್ನನ್ನು ಆಫ್ರಿಕಾ ಖಂಡದ ತನಕ ಕರೆದೊಯ್ದಿತು. ದುಬೈನಲ್ಲಿ ಅಲೆಸಿತು. ದರ್‍-ಎ-ಸಲಾಮ್ ವಿಮಾನ ನಿಲ್ದಾಣದಲ್ಲಿ ಕುಳಿತು ಟಿಪ್ಪಣಿ ಮಾಡಿಕೊಳ್ಳುವಂತೆ ಮಾಡಿತು. ಭಯಾನಕ ಹತ್ಯೆಗಳಿಗೆ, ರಕ್ತಪಾತಗಳಿಗೆ, ಷೂಟ್ ಔಟ್ ಗಳಿಗೆ ಸಾಕ್ಷಿಯಾಗುವಂತೆ ಮಾಡಿತು. ಈಗಿದ್ದರು ಈಗಿಲ್ಲ ಎಂಬಂತೆ ನನ್ನ ಕಣ್ಣೆದುರಿಗೇ ರೌಡಿಗಳು ಕೊಲೆಯಾಗಿ ಹೋದರು. ಕೆಲವರು ಕಣ್ಮರೆಯಾದರು. ಬದಲಾದಂತೆ ನಟಿಸಿದರು. ಕೆಲವರು ಬದಲೂ ಆದರು. ಅವರು ಮೈಮೇಲೆ ಬೆರಳಿಡಲು ಜಾಗವಿಲ್ಲದಂತೆ ಚಿನ್ನ ಹೇರಿಕೊಂಡು ತಿರುಗಿದ್ದನ್ನು ನೋಡಿದ್ದೇನೆ. ಬರೀ ಒಂದು ಚಡ್ಡಿಯಲ್ಲಿ ಲಾಕಪ್ಪಿನೊಳಗೆ ದೈನೇಸಿಯಾಗಿ ನಿಂತದ್ದನ್ನು ಕಂಡಿದ್ದೇನೆ. ಜೈಲುಗಳಲ್ಲಿ ಬಡಿದಾಡುವುದು ನೋಡಿದ್ದೇನೆ. ಪ್ರಾಣಭಯದಿಂದ ತತ್ತರಿಸುವುದನ್ನು ಕಂಡಿದ್ದೇನೆ. ಕಡೆಗೆ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದ ಮೇಲೆ ಉದ್ದೋಉದ್ದಕ್ಕೆ ಹೆಣವಾಗಿ ಮಲಗಿದ್ದನ್ನೂ ನೋಡಿದ್ದೇನೆ. ಇದರೆಲ್ಲದರ ಸಾರ “ಪಾಪಿಗಳ ಲೋಕದಲ್ಲಿ” ಪುಸ್ತಕದಲ್ಲಿದೆ.

ಒಂದು ಸುದೀರ್ಘ ಬಿಡುವು ಕಳೆಯಲು ಜೊತೆಗಿಟ್ಟುಕೊಳ್ಳಬಹುದಾದ ಪುಸ್ತಕ. ತರಿಸಿ ನೋಡಿ.

-ವೀ

—————————————————————————————————————————————-

ಮೇಜರ್‍ ಸಂದೀಪ್ ಉನ್ನಿಕೃಷ್ನನ್

ಮೇಜರ್‍ ಸಂದೀಪ್ ಉನ್ನಿಕೃಷ್ನನ್

ಅಕ್ಷರ ಮೆರವಣಿಗೆ ಮನೆಮನೆ ತಿರುಗಲಿ

“ಅಣ್ಣಾ, ಪುಸ್ತಕ ಓದುತ್ತಿದ್ದರೆ ಕಣ್ಣೀರು ತಡೆಯಲಾಗುತ್ತಿಲ್ಲ. ದುಂಖ ಉಮ್ಮಳಿಸಿ ಬರುತ್ತಿದೆ” ಅಂತ ಗೊರೂರು ನಾಗರಾಜ್ ಎಸ್ಸೆಮ್ಮೆಸ್ ಕಳಿಸಿದ್ದ. ಅವನು ವಿಮರ್ಷಕನಲ್ಲ, ಪಂಡಿತನಲ್ಲ, ಪತ್ರಿಕೆ ಯೊಂದಿಗೇ ಬೆಳೆಯುತ್ತಾ ಬಂದ ಭಾವುಕ ಓದುಗ. ಅವನು ಎಸ್ಸೆಮ್ಮೆಸ್ ಕಳಿಸಿದ್ದು ’ಮೇಜರ್‍ ಸಂದೀಪ್ ಹತ್ಯೆ’ ಪುಸ್ತಕದ ಬಗ್ಗೆ.

ನಾನು ಸಾಮಾನ್ಯವಾಗಿ ಒಂದು ಪುಸ್ತಕ ಬರೆದು ಬಿಡುಗಡೆ ಮಾಡಿದ ಮೇಲೆ ಅದಕ್ಕೆ ಪ್ರತಿಕ್ರಿಯೆ ಬರುವುದನ್ನು ಸಹಜ ಕುತೂಹಲದಿಂದ ಕಾಯುತ್ತಿರುತ್ತೇನೆ. ಪತ್ರಿಕೆಗಳ್ಯಾವೂ ಸಾಮಾನ್ಯವಾಗಿ ನನ್ನ ಪುಸ್ತಕಗಳನ್ನು ಗಂಭೀರವಾಗಿ ಪರಿಗಣಿಸಿ ವಿಮರ್ಶಿಸುವುದಿಲ್ಲ. ಇತ್ತೀಚಿನ ಯಾವ ವಿಮರ್ಶಕರೂ ನನಗೆ ಪರಿಚಯವಿಲ್ಲ. ನನ್ನ ವಿಮರ್ಶಕರೇನಿದ್ದರೂ ನನ್ನ ಓದುಗ ದೊರೆ. ಸಮಾರಂಭಕ್ಕೇ ಬಂದು ಪುಸ್ತಕ ಒಯ್ಯುತ್ತಾನೆ. ತನ್ನದೇ ಆದ ರೀತಿಯಲ್ಲಿ ಬಿಡುವು ಮಾಡಿಕೊಂಡು, ಮನೆಯಲ್ಲಿ ತನ್ನ ಪ್ರೀತಿಯ ಕೋಣೆಯ ಮೂಲೆ ಹುಡುಕಿಕೊಂಡು ನಿಧಾನವಾಗಿ ಪುಸ್ತಕ ಕೈಗೆತ್ತಿಕೊಳ್ಳುತ್ತಾನೆ. ಅಲ್ಲಿಂದ ಶುರುವಾಗುತ್ತದೆ ನೋಡಿ, ನನ್ನ-ಅವನ ಬಾಂಧವ್ಯ. ಆತನನ್ನು ನಾನು ಕ್ರಮೇಣ ಭಾವುಕ ತೆಕ್ಕೆಗೆ ತೆಗೆದುಕೊಳ್ಳಬೇಕು. ಆಸಕ್ತಿ ಕುದುರಿಸಬೇಕು. ಪುಳಕಗೊಳಿಸಬೇಕು. ಛಕ್ಕನೇ ಒಂದು ತಿರುವು ಕೊಡಬೇಕು. ’ಹೌದಲ್ಲವಾ?” ಅಂತ ಯೋಚಿಸುವಂತೆ ಮಾಡಬೇಕು. ಓದುಗರಲ್ಲಿ ಒಂದು ಭಾವೋತ್ಕರ್ಷ ಮೂಡಬೇಕು. ಕಣ್ಣು ಹನಿಗೂಡಬೇಕು. ಒಂದು ಸಾತ್ವಿಕ ಸಿಟ್ಟು ಆತನಲ್ಲಿ ಅವಡುಗಚ್ಚಬೇಕು. ಓದಿ ಮುಗಿಸಿದ ಮೇಲೆ ಪುಸ್ತಕದ ಬಗ್ಗೆ ಯಾರೊಂದಿಗಾದರೂ ಚರ್ಚಿಸಲೇಬೇಕೆಂಬ ತಪನೆ ಹುಟ್ಟಬೇಕು.

ಇದಿಷ್ಟೂ ಕೆಲಸ “ಮೇಜರ್‍ ಸಂದೀದ್ ಹತ್ಯೆ” ಪುಸ್ತಕ ಮಾಡಿದೆ, ಮಾಡುತ್ತದೆ. ’ಪುಸ್ತಕ ನಿನಗೆ ನಿಜಕ್ಕೂ ಇಷ್ಟವಾಗಿದ್ದರೆ ಅದನ್ನು ಓದುವಂತೆ ಹತ್ತು ಜನ ಗೆಳೆಯರಿಗೆ ಹೇಳು’ ಅಂತ ಗೊರೂರು ನಾಗರಾಜ್ ಗೆ ಒಂದು ಮೆಸೇಜ್ ಕಳಿಸಿ ಸುಮ್ಮನಾದೆ. ನಿಮ್ಮಲ್ಲಾದರೂ ನಾನು ಕೇಳಿಕೊಳ್ಳುವುದಿಷ್ಟೇ: ಮುಂಬಯಿಯ ನರಮೇಧದ ಕುರಿತಾದ ಪುಸ್ತಕವನ್ನು ತರಿಸಿಕೊಂಡು ಓದಿ. ಗೆಳೆಯರಿಗೆ ತರಿಸಿಕೊಡಿ. ಅಕ್ಷರ ಮೆರವಣಿಗೆ ಮನೆ ಮನೆ ತಿರುಗಲಿ.

-ಬೆಳಗೆರೆ

——————————————————————————————————————————————

ಹೇಳಿ ಹೋಗು ಕಾರಣ

ಹೇಳಿ ಹೋಗು ಕಾರಣ

ಕೆಲವು ಲಕ್ಷ ಜನ  ಹುಡುಗರು ತಮ್ಮನ್ನು ತಾವು ಈ ಕಾದಂಬರಿಯ ನಾಯಕ ಹಿಮವಂತನೊಂದಿಗೆ ಐಡೆಂಟಿಫ್ಯೈ ಮಾಡಿಕೊಂಡರು. ಹಾಗೆಯೇ  ಅನೇಕ ಹುಡುಗಿಯರು ತಮ್ಮೊಳಗಿನ ಕೊಂಚ ಪ್ರಾರ್ಥನಾ; ಕೊಂಚ ಊರ್ಮಿಳಾರ ವ್ಯಕ್ತಿತ್ವಗಳ ಮಧ್ಯೆ ಜೀಕುತ್ತಾ ಖುಷಿಪಟ್ಟರು. ನಾಚಿಕೊಂಡರು. ಪತ್ರಿಕೆಯಲ್ಲಿ ವಾರ ಧಾರಾವಾಹಿಯಾಗಿ ಪ್ರಕಟಗೊಂಡ ಈ ಕಾದಂಬರಿ, ಪ್ರಕಟವಾಗುತ್ತಿದಷ್ಟು ದಿನವೂ ಮನೆಮನೆಯ ಚರ್ಚೆಯಾಗಿತ್ತು. ’ದಯವಿಟ್ಟು ಹಿಮವಂತನಿಗೆ ಮೋಸ ಮಾಡಬೇಡಿ, ಅವನಿಗೆ ಪ್ರಾರ್ಥನ ಸಿಗೋಹಂಗೆ ಮಾಡಿ’ ಅಂತ ಗೋಗರೆದ ಹುಡುಗರು ಎಷ್ಡು ಜನವೋ? ’ನಿಜಕ್ಕೊ ಪ್ರಾರ್ಥನಾಳಷ್ಟು ನಿರ್ದಯಿ ಹುಡುಗಿಯರು ಇರುತ್ತಾರಾ?’ ಅಂತ ಕೇಳಿದ ಹುಡುಗಿಯರು ಎಷ್ಟು ಜನವೋ? ಇದು ಪ್ರೇಮ ಪುಸ್ತಕವಾ ನೊಂದ ಮನದ ನಿಡುಸುಯ್ಯುವಿಕೆಯಾ? ನೀವೇ ಓದಿ ಹೇಳಿ.

-ರವೀ

——————————————————————————————————————————————

Muslim

Muslim

ಮತ್ತು ಅವನು ಆ ಕೆಲಸ ಮಾಡಿಬಿಟ್ಟ.! ಅವನ ಹೆಸರು ಮುಸ್ಲಿಂ. ಮುಸ್ಲಿಂ ಮೂಲಭೂತವಾದ ಯಾವ ದೇಶವನ್ನೂ ಇವತ್ತಿನ ತನಕ ಸುಭೀಕ್ಷವಾಗಿರಲಿಕ್ಕೆ ಬಿಟ್ಟಿಲ್ಲ. ಅದನ್ನು ಒಪ್ಪಿಕೊಂಡ ಯಾವ ಮನುಷ್ಯನೂ ಮನುಷ್ಯನಾಗಿ ಉಳಿದಿಲ್ಲ. ದುರಂತವೆಂದರೆ ಭಾರತಕ್ಕಾಗಲೆ ಮುಸ್ಲಿಂ ಮೂಲಭೂತವಾದ ಕಾಲಿಟ್ಟುಬಿಟ್ಟಿದೆ. ಇಲ್ಲಿ ’ಮುಸ್ಲಿಂ ಬ್ರದರ್‍ ಹುಡ್ ’ ಹುಟ್ಟಿಕೊಂಡ ಬಗೆ, ಪಾನ್ ಇಸ್ಲಾಮಿಕ್ ಸಂಘಟನೆಗಳು, ಒಸಾಮ ಬಿನ್ ಲ್ಯಾಡನ್ ಎಲ್ಲದರ ಬಗೆಗೆ ಇಲ್ಲಿ ಚರ್ಚಿಸಲಾಗಿದೆ. ಮತಾಂಧ ಚಳವಳಿಯ ಒಟ್ಟು ಪರಿಣಾಮಗಳಿಗೆ ಹಿಡಿದ ಕನ್ನಡಿಯೇ ಈ ಪುಸ್ತಕ.

ಧರ್ಮದ ಯುದ್ಧದಲ್ಲಿ ಸತ್ತರೆ ಸ್ವರ್ಗ:

ಅವರೆಲ್ಲಾ ಬಡವರು. ತಂತಮ್ಮ ದೇಶಗಳಲ್ಲಿ ಅರೆ ಹೊಟ್ಟೆಯಷ್ಟೂ ಊಟ ಹುಟ್ಟದವರು. ಅಂಥವರನ್ನೇ ಮತಾಂಧ ಮುಸ್ಲಿಂ ನಾಯಕರು ’ದೈವ ಸೈನಿಕ’ರನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಅಂಥವರಿಗೆ ಅನ್ನ, ಬಟ್ಟೆ, ಕೊಟ್ಟು, ಹೆಗಲಿಗೆ ಬಂದೂಕು ಕೊಟ್ಟು, ಧರ್ಮಯುದ್ದದಲ್ಲಿ ನೀನು ಸತ್ತರೆ ಸ್ವರ್ಗದಲ್ಲಿ ನಿನಗೋಸ್ಕರ ಎಪ್ಪತ್ತು ಜನ ಅಕ್ಷತ ಕನ್ನೆಯರು ಎಲ್ಲ ಇರಾದೆಗಳನ್ನು ಪೂರೈಸಲು ಕಾಯುತ್ತಾ ನಿಂತಿರುತ್ತಾರೆ ಎಂಬ ಭರವಸೆ ಕೊಟ್ಟು ಭಾರತ ದಂತಹ  ದೇಶದ ಮೇಲೆ ಯುದ್ಧಕ್ಕೆ ಕಳಿಸುತ್ತಾರೆ. ಎಲ್ಲೂ ಕೆಲಸ ಸಿಗದೆ, ಗೌರವ ಸಿಗದೆ, ನೆಮ್ಮದಿಸಿಗದೆ  ಹತಾಶನಾದ ಯುವಕ ಬೇಗ ಮತಾಂಧತೆಯೆಡೆಗೆ ಆಕರ್ಷಿತನಾಗುತ್ತಾನೆ. ಈ ಕೆಲಸವನ್ನು ರಾಜಕೀಯ ದ್ವೇಷಗಳಿಗಗಿ ಪಾಕಿಸ್ತಾನದಂತಹ  ರಾಷ್ಟ್ರಗಳು ವ್ಯವಸ್ಥಿತವಾಗಿ ಮಾಡುತ್ತಿವೆ. ಇಂಥ ಪುಸ್ತಕ ಬರೆಯುವುದು ಕೊಂಚ ಅಪಾಯಕಾರಿಯೇ. ಪುಸ್ತಕ ಓದಿ ಮುಗಿಸಿದ ಮೇಲೆ ಒಂದು ಸಾಲು ನಿಮ್ಮ ಅಭಿಪ್ರಾಯ ಬರೆದು ಕಳಿಸಿದರೆ, ನಾನು ಋಣಿ.

-ರವೀ.

———————————————————————————————————-

ಓದುವ ಖುಷಿಗೆ

ಓದುವ ಖುಷಿಗೆ

ಓದುವ ಖುಷಿಗೆ

ನಾಲ್ಕು ಪುಸ್ತಕಗಳು ಮರುಮುದ್ರಣಗೊಂಡು ಬಂದಿವೆ. ಪತ್ರಿಕೆಯಲ್ಲಿ  ಧಾರಾವಾಹಿಯಾಗಿ  ಪ್ರಕಟಗೊಂಡ  ’ಹೇಳಿ ಹೋಗು ಕಾರಣ ;’ ’ನೀ ಹಿಂಗ ನೋಡಬ್ಯಾಡ ನನ್ನ’ ; ಭೂಗತ ಜಗತ್ತಿಗೆ ಸಂಬಂಧಿಸಿದ  ’ಒಮರ್ಟಾ’ ಹಾಗೂ ’ಗಾಡ್ ಫಾದರ್‍’;

 • ಸದಾ ಪ್ರೀತಿಗಾಗಿ ತುಡಿಯುವ, ಅದಕ್ಕೋಸ್ಕರ ಎಲ್ಲವನ್ನೂ ಸಹಿಸಿಕೊಳುವ, ಧಿಕ್ಕರಿಸುವ, ಕಾತರಿಸುವ, ತಪ್ಪಿಸಿಕೊಳುವ, ಕಣ್ಣು ತೋಯಿಸಿಕೊಳ್ಳುವ, ಕನಸುವ ಮನುಷ್ಯನೊಬ್ಬ ನನ್ನಲ್ಲಿ ಇಲ್ಲದೇ ಹೋಗಿದಿದ್ದರೆ ’ನೀ ಹಿಂಗ ನೋಡಬ್ಯಾಡ ನನ್ನ’ ಕಾದಂಬರಿಯಲ್ಲಿ ಒಬ್ಬ ಶಿಶಿರಚಂದ್ರ ಹೇಗೆ ಮೂಡಿ ನಿಲ್ಲುತ್ತಿದ್ದ?’  ಗಾಢ ಪ್ರೀತಿಯಲ್ಲಿರುವ ನಿಮ್ಮ ಹುಡುಗಿಗೆ ಅಥವಾ ನೀವು ಪ್ರೀತಿಸುವ ಹುಡುಗನಿಗೆ ಪುಸ್ತಕ ಕೊಟ್ಟು ನೋಡಿ. ನಿಮ್ಮ ಪ್ರೀತಿ ಮತ್ತಷ್ಟು ಹೆಪ್ಪುಗಟ್ಟೀತು.
 • ’ಹೇಳಿ ಹೋಗು ಕಾರಣ ’ ವಿಫಲ ಪ್ರೇಮದ ಕನಲಿಕೆ. ಈ ಕಾದಂಬರಿಯ ಪಾತ್ರಗಳಲ್ಲಿ ನಾನಿದ್ದೇನೆ, ನೀವಿದ್ದೀರಿ, ನಾವೆಲ್ಲರೂ ಒಂದಲ್ಲ ಒಂದು ಹಂತದಲ್ಲಿ ಕಳೆದುಕೊಂಡ ಅಷ್ಟಾಭರಣದಂತಹ ಪ್ರೀತಿಯಿದೆ. ಇದು ಪ್ರೇಮ ಪುಸ್ತಕವಾ? ನೊಂದ ಮನದ ನಿಡುಸುಯ್ಯುವಿಕೆಯಾ? ಓದಿ ಹೇಳಿ.
 • ಬಳ್ಳಾರಿಯ ಬಂಡೆಗಲ್ಲುಗಳ ನಡುವಿನಿಂದ ಎದ್ದು ಬರುವ ಅಪರೂದ ಕ್ಯಾರೆಕ್ಟರು ಜೀವಾ. ಅವನ ಸುತ್ತ ಹೆಣೆದ ಕಾದಂಬರಿಯೇ ’ಒಮರ್ಟಾ’. ಕಾದಂಬರಿ ಕೈಗೆತ್ತಿಕೊಂಡ ಮೇಲೆ ನೀವು ಒಂದು ಗುಕ್ಕಿನಲ್ಲಿ ಓದಿ ಮುಗಿಸದೆ ಇರಲಾರಿರಿ.
 • ಅಂಡರ್‍ ವರ್ಲ್ಡಗೆ ಸಂಭಂದಿಸಿದಂತೆ ಜಗತ್ತಿನ ಸರ್ವಶ್ರೇಷ್ಠ ಕೃತಿ ಅಂತ ಇರುವುದಾದರೆ ಅದು ಮಾರಿಯೊ ಫ್ಯೂಜೋ ಬರೆದ ಇಂಗ್ಲೀಷಿನ ’ಗಾಡ್ ಫಾದರ್‍ ’. ಅದನ್ನೇ ಆಧಾರವಾಗಿಟ್ಟುಕೊಂಡು, ಕಥೆಯನ್ನು ಬೆಂಗಳೂರಿಗೆ ತಂದು, ಇಲ್ಲಿನ ಪಾತ್ರಗಳೊಂದಿಗೆ ವ್ಯವಹಾರ ಕುದುರಿಸಿ ಒಂದು ಸುದೀರ್ಘ ಕಾದಂಬರಿ ಬರೆ‌ದಿದ್ದೇನೆ. ವರ್ಷಗಳ ನಂತರ ಈ ಕಾದಂಬರಿಗಳೆಲ್ಲ ಮರು ಮುದ್ರಣಗೊಂಡು ಮಾರುಕಟ್ಟೆಗೆ ಬಂದಿವೆ. ನಿಮ್ಮ ಓದುವ ಖುಷಿ  ಹೆಚ್ಚಲಿ ಅಂತ…

-ರವೀ

————————————————————————————————————

ಜಿಹಾದಿ ಜಗತ್ತಿನ ಕರಾಳ ಮುಖಗಳು

ನೀನಾ ಪಾಕಿಸ್ತಾನ

ನೀನಾ ಪಾಕಿಸ್ತಾನ

ಆ ಕಣ್ಣಿನ ಡಾಕ್ಟರು ಹತ್ಯೆ ಮಾಡಿಸಿದ:

’ನೀನಾ ಪಾಕಿಸ್ತಾನ?’ ಪುಸ್ತಕದಲ್ಲಿ ಡಾ. ಅಯ್ಯನ್ ಅಲ್ ಜವಾರಿ ಎಂಬುವವನ ಬಗ್ಗೆ ಒಂದು ಅಧ್ಯಾಯವನ್ನೇ ಬರೆಯಲಾಗಿದೆ. ಆತ ವೃತ್ತಿಯಿಂದ ವೈದ್ಯನಾದರೂ ಪ್ರವೃತ್ತಿಯಿಂದ ಭಯೋತ್ಪಾದಕ. Infact ಭಯೋತ್ಪಾದಕ ಸಂಘಟನೆಗಳ  ಪಾಲಿನ ಅಸಲಿ ಮಿದುಳೇ ಅವನು. ಒಸಾಮಾನ ಹುಡುಗರು ಅಮೇರಿಕದ ಗಗನ ಚುಂಬಿ ಕಟ್ಟಡಗಳೊಳಕ್ಕೆ ವಿಮಾನ ನುಗ್ಗಿಸಿ ಅವುಗಳನ್ನು ಪುಡಿಗುಟ್ಟಿದರಲ್ಲ? ಆ ಕೃತ್ಯದ ಹಿಂದಿನ ಅಸಲಿ ಬ್ರೈನ್, ಅಲ್ ಜವಾಹಿರಿಯದು. ಇವತ್ತು ಆತ ಜಗತ್ತಿನ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಗಳ ಪಟ್ಟಿಯಲ್ಲಿ ಎರಡನೆಯವನು. ಅವನಿಗೆ ಹೆಚ್ಚೆಂದರೆ ಐವತ್ತಾರು ವರ್ಷ ವಯಸ್ಸು. ವಿದ್ಯಾರ್ಧಿಯಾಗಿದ್ದಾಗ ತುಂಬ ಬುದ್ಧಿವಂತ ಮತ್ತು ಅತ್ಯಂತ ಸಂಭಾವಿತ ಅನ್ನಿಸಿಕೊಂಡಿದ್ದ. ಆದರೆ ಅವನು ಯುವಕನಾಗಿದ್ದಾಗ ಅರಬ್  ದೇಶಗಳ  ಸೈನ್ಯವನ್ನು ಇಸ್ರೇಲಿಗಳು ಸೋಲಿಸಿದುದನ್ನು ಕಣ್ಣಾರೆ ನೋಡಿದ. ಅದೇಕೋ ಅವನ  ಮನಸ್ಸು ಮೊರಟಾಗಿ ಹೋಯಿತು. ಇಸ್ಲಾಂ ಧರ್ಮಕ್ಕೆ  ಧರ್ಮವೇ ಸೋತು ಹೋಯಿತೇನೋ ಅನ್ನಿಸತೊಡಿಗಿತು. ಅವನು ತಕ್ಷಣ ಈಜಿಪ್ಷಿಯನ್ ಸೇನೆಗೆ ವೈದ್ಯನಾಗಿ ಸೇರಿಕೋಡ. ಸರ್ಕಾರಕ್ಕೆ ಗೊತ್ತಾಗದ ಹಾಗೆ ’ ಇಸ್ಲಾಮಿಕ್ ಜೆಹಾದ್ ’ ಎಂಬ ಗುಪ್ತ ಸಂಘಟನೆಯ ಸದಸ್ಯನಾದ. ಅಷ್ಟೇ ಅಲ್ಲ, ತನ್ನ ದೇಶವಾದ ಈಜಿಪ್ತದ ಅಧ್ಯಕ್ಷ ಅನ್ವರ್‍ ಸಾದತ್, ಇಸ್ರೇಲ್ ಸಾದತ್ ; ಇಸ್ರೇಲಿಗಳೊಂದಿಗೆ ಸಂಧಾನ ಮಾಡಿಕೊಂಡಾಗ ಈ ಡಾ. ಅಲ್ ಜವಾಹಿರಿ, ಅವನನ್ನು ಹಾಡಹಗಲೇ ಮಿಲಿಟರಿ ಪೆರೇಡ್ ಗ್ರೌಂಡಿನಲ್ಲಿ ಜೆಹಾದಿ ಸೈನಿಕರನ್ನಿಟ್ಟು ಕೊಲ್ಲಿಸಿಬಿಟ್ಟ! ಅವನಿಗಾಗ  ಬರಿ ಮೂವತ್ತೊಂದು ವಯಸ್ಸು. ಆಮೇಲೆ ಅವನು ಭಯೋತ್ಪಾದಕ ಪ್ರಪಂಚದ ಬಹುದೊಡ್ಡ ನಾಯಕನಾಗಿ ಬೆಳೆದ ಕಥೆ ಇದೆಯಲ್ಲ? ಅದು ರೋಚಕ, ಭಯಾನಕ, ಶಾಂತಿ, ಸಹನೆ, ದಾನ, ಭ್ರಾತೃಭಾವ  ಮುಂತಾದವನ್ನು ಬೋಧಿಸುವ ಇಸ್ಲಾಂ ಧರ್ಮದ ನೆರಳಿನಲ್ಲಿ ಒಸಾಮಾ, ಅಲ್ – ಜವಾಹಿರಿಯಂತಹ ಹವರ ಫಸಲು ಅದ್ಹೇಗೆ ಬೆಳೆದುಬಿಡುತ್ತದೆಯೋ? ನೀವೊಮ್ಮೆ ಓದಬೇಕು; ನೀನಾ ಪಾಕಿಸ್ತಾನ?

-ರವಿ

————————————————————————————————————

ಅಲ್ಲಾಹ್ – ಜೆಹಾದ್ ಮತ್ತು ಅದರ ನಿಗೂಢತೆ!

ದೊಡ್ಡವರ ಸಿಟ್ಟು ಅಂದರೆ ಅದು. ಸೆಪ್ಟೆಂಬರ್‍ 11,2001 ರಂದು ಅಮೆರಿಕಾದ ಆಕಾಶ ಚುಂಬಿ ಸೌಧ ಗಳನ್ನು ಒಸಾಮಾ ಬಿನ್ ಲಾಡೆನ್ ನ ಶಿಷ್ಯರು ಅಮೆರಿಕದ್ದೇ ವಿಮಾನಗಳನ್ನು ಒಯ್ದು, ರಭಸದಿಂದ ಒಳನುಗ್ಗಿಸಿ ಕೆಡವಿಹಾಕಿದರಲ್ಲ? ಅದಕ್ಕೆ ಜಾರ್ಜ್ ಬುಷ್ ಅಬ್ಬರದ ಹೆಬ್ಬುಲಿಯಂತೆ ಉತ್ತರಿಸಲು ಎದ್ದು ನಿಂತರು. ನೆಪಕ್ಕೆ ಒಂದೆರಡು ದೇಶಗಳ ನೆರವು ಕೇಳಿದರು. ಆದರೆ ಅಮೆರಿಕ ಅಂದರೆ ಸುಮ್ಮನೆ ಮಾತಾ? ಹಿಂದೆ 1998ರಲ್ಲಿ ’ಇಂಥ ಜಾಗದಲ್ಲಿ ಒಸಾಮಾ ಅಡಗಿರಬಹುದು ಅಂತ ಊಹಿಸಿ ಅಮೇರಿಕದಲ್ಲಿ ಕುಳಿತೇ ಕ್ರುಯ್ಸ್ ಮಿಸೈಲ್ಸ್ ಬಿಟ್ಟು ಅಫಘನಿಸ್ತಾನದಲ್ಲಿದ್ದ ಭಯೋತ್ಪಾದಕರ ಎರಡು ದೊಡ್ಡ ಶಿಬಿರಗಳನ್ನು ಛಿದ್ರ ಚಿಂದಿ ಮಾಡಿ ಹಾಕಲಾಗಿತ್ತು. ಅಂಥದರಲ್ಲಿ ತಮ್ಮದೇ ದೇಶಕ್ಕೆ ಬಂದು ಐದು ಸಾವಿರ ಮಂದಿಯನ್ನು ಕೊಂದರೆ ಅಮೆರಿಕದವರು ಸುಮ್ಮನಿರುತ್ತಾರಾ?

ಅದ್ಯಾವ ಪರಿ ಸಿದ್ಧತೆ ಮಾಡಿಕೊಂಡು, ಪಾಕಿಸ್ತಾನವನ್ನೇ ತಮ್ಮ ನೆಲೆಯನ್ನಾಗಿ ಮಾಡಿಕೊಂಡು, ಅಫಘನಿಸ್ತಾನದ ಮೇಲೆ ಮುರಕೊಂಡು ಬಿದ್ದರೆಂದರೆ, ಒಸಾಮಾನ ಅಲ್ ಕೈದಾ ಮತ್ತು ಮಲ್ಲಾ ಒಮರ್‍ನ  ತಾಲಿಬಾನ್ ಗಳೆರಡೂ ಹೇಳ ಹೆಸರಿಲ್ಲದಂತಾಗಿ ಹೋದವು. ಕಾಬೂಲ್ ನಲ್ಲಿ ತಾಲಿಬಾನ್ ಸರ್ಕಾರ ಬಿತ್ತು. ಭಯೋತ್ಪಾದಕರ ತಂದೆ ಅನ್ನಿಸಿಕೊಂಡ ಒಸಾಮಾ ಬಿನ್ ಲಾಡೆನ್ ಅಭೇದ್ಯ ಪರ್ವತಗಳೊಳಕ್ಕೆ ಹೋಗಿ ಬಚ್ಚಿಟ್ಟುಕೊಂಡ. ಅವನ ಬಲಗೈ ಬಂಟ ಅಲ್ ಜವಾಹಿರಿ ಸತ್ತೇ ಹೋದ ಎಂಬ ಸುದ್ದಿ ಹರಡಿತು. ಸಾವಿರಾರು ಜನ ತಾಲೀಬಾನ್ ಯೋಧರು ಸತ್ತು ಹೋದರು. ಪರಮ ಹರಾಮಖೋರ ದೇಶವಾದ ಪಾಕಿಸ್ತಾನ್, ತಾನೇ ವಿಷ ಉಣಿಸಿ ಬೆಳೆಸಿದ ಅಲ್ ಕೈದಾದ ಐನೂರು ಜನ ಉಗ್ರರನ್ನು ಬಂಧಿಸಿ ಅಮೆರಿಕದ ’ಕಾಫಿರ’ ರ ಕೈಗೆ ಒಪ್ಪಿಸಿತು. ಅಲ್ ಕೈದಾದ ಮೂವರು ಅತಿ ಪ್ರಮುಖ ನಾಯಕರ ಬಂಧನವಾಯಿತು. ನಿಜ ಹೇಳಬೇಕೆಂದರೆ, ಇನ್ನು ಕೆಲವೇ ದಿನಗಳಲ್ಲಿ ಅಫಘನಿಸ್ತಾನದ ತೋರಾಬೋರಾ ಪರ್ವತಗಳಿಂದ ಒಸಾಮಾನ ಹೆಣ ತೆಗೆದು ಬಯಲಿಗೆ ಹಾಕುತ್ತದೆ ಅಮೇರಿಕ ಅಂತ ಮಾತನಾಡಿಕೊಂಡರು. ಉಹುಂ, ಆದಾಗಲೇ ಇಲ್ಲ.ಕೈಯಲ್ಲಿ ak47 ಹಿಡಿದು ಕುಳಿತ ಅಲ್ ಕೈದಾ ನಾಯಕ ಒಸಾಮಾ ಅಬ್ಬರಿಸಿದ; ಅಮೇರಿಕದವರು ಒಬ್ಬ ಮುಸಲ್ಮಾನನನ್ನು ಕೊಂದರೆ, ನಾವು ನೂರು ಅಮೆರಿಕನ್ನರನ್ನು ಕೊಲ್ಲುತ್ತೇವೆ! ಆತನ ಪಕ್ಕದಲ್ಲೇ ಬಲಗೈ ಬಂಟ ಅಲ್ ಜವಾಹಿರಿ ಬುಸುಗುಡುತ್ತಾ ಕುಳಿತಿದ್ದ. ಇವತ್ತಿಗೂ ಅವರನ್ನ ಅಮೆರಿಕ ಮಟ್ಟ ಹಾಕಲು ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ಅಲ್ ಕೈದಾ ಎಂಬುದು ಇಡೀ ಜಗತ್ತಿನಲ್ಲಿಯೇ ಅತ್ಯಂತ ರಹಸ್ಯ ಸಂಘಟನೆ. ಅದರ ಕಾರ್ಯವೈಖರಿಯೇ ಬೇರೆ.

ಒಬ್ಬ ಮುಖ್ಯ ನಾಯಕನ ಬಂಧನವಾದರೂ ಅವನ ಜೊತೆಗಿರುವ ಇಬ್ಬರು ಮೂವರ ರಹಸ್ಯಗಳು ಗೊತ್ತಾಗಬಹುದೇನೋ ಹೊರೆತಾಗಿ, ಇಡೀ ಸಂಘಟನೆಯ ರಹಸ್ಯಗಳು ಬದಲಾಗಿ, ಅದು ಕುಸಿದು ಬೀಳುವುದಿಲ್ಲ. ಅಸಲಿಗೆ ಎಲ್ಲಾ ರಹಸ್ಯಗಳೂ ಒಬ್ಬೇ ವ್ಯಕ್ತಿಗೆ ಗೊತ್ತಿರುವುದೂ ಇಲ್ಲ. ಇಂಟರೆಸ್ಟಿಂಗ್ ಆದ ಸಂಗತಿಯೆಂದರೆ ಸೆಪ್ಟೆಂಬರ್‍ 11, 2001 ರಂದು ಅಮೆರಿಕದ ಸೌಧಗಳೊಳಕ್ಕೆ ವಿಮಾನಗಳು ನುಗ್ಗಲಿವೆ ಎಂಬ ಸಂಗತಿ ಖುದ್ದು ಒಸಾಮಾಗೆ ಸೆಪ್ಟೆಂಬರ್‍ 1 ನೇ ತಾರೀಕಿನ ತನಕ ಗೊತ್ತಿರಲಿಲ್ಲ.

ಅವನಿಗೆ ಗೊತ್ತಿದ್ದುದು ಮತ್ತು ಅವನು ನಂಬಿದ್ದುದು ಒಂದನ್ನೇ; ಅಮೆರಿಕದ ಕೈಲಿ ಹಣವಿದೆ, ಜನವಿದ್ದಾರೆ, ಆಯುಧಗಳಿವೆ. ಆದರೆ ನಮ್ಮೊಂದಿಗೆ ಅಲ್ಲಾಹುವಿದ್ದಾನೆ, ಜೆಹಾದ್ ಇದೆ.

ಇಷ್ಟಕ್ಕೂ ಅಮೇರಿಕದ ಗೋಪುರಗಳು ಮುರಿದು ಬೀಳುತ್ತಿದ್ದಾಗ ಒಸಾಮಾ ಬಿನ್ ಲಾಡೆನ್ ಎಲ್ಲಿದ್ದ ಗೊತ್ತೇ? ನೀವು ತಪ್ಪದೇ ತರಿಸಿಕೊಂಡು ಓದಬೇಕು ನೀನಾ ಪಾಕಿಸ್ತಾನ?

-ಬೆಳಗೆರೆ

————————————————————————————————————–

ಚಲಂ

ಚಲಂ

ಸುಮಾರು ಮೂವತ್ತು ವರ್ಷಗಳಿಂದ ಒಂದು ತೆಲುಗು ಪುಸ್ತಕ ನನ್ನೊಂದಿಗಿದೆ. ನಾನು ಹೋದಲ್ಲಿಗೆಲ್ಲ ಲಗೇಜಿನೊಂದಿಗೆ ಬಂದಿದೆ. ಕಪಾಟಿನಲ್ಲಿ ಕುಳಿತಿದೆ. ದಿಂಬಿನಡಿ ನಲುಗಿದೆ. ಬೇಸರವಾದಾಗ ಸಮಾಧಾನ ಹೇಳಿದೆ. ಅದರ ರಟ್ಟು ಹರಿದಿದೆ. ಪುಟಗಳು ಜೀರ್ಣ ಜೀರ್ಣ. ಆದರೂ ಜೊತೆಯಲ್ಲಿಟ್ಟುಕೊಂಡೇ ಇದ್ದೆ. ಅದು ತೆಲುಗಿನ ’ಚಲಂ’ ನ ಆತ್ಮಚರಿತ್ರೆ. ನಾನು ಆತನಂತೆ ಬರೆಯಲು ಪ್ರಯತ್ನಿಸಿದೆ. ಆಗಲಿಲ್ಲ. ಆತನಂತೆ ಬದುಕಲು ಪ್ರಯತ್ನಿಸಿದೆ. ಸಾಧ್ಯವಾಗಲಿಲ್ಲ. ಆತನನ್ನು ಕಡೆಗೆ ದಿಕ್ಕಿರಿಸಲು ನೋಡಿದೆ. ಅದೂ ಸಾಧ್ಯವಾಗಲಿಲ್ಲ. ಹೀಗಾಗಿ,ಆತನನ್ನು ನೀಗಿಸಿಕೊಳ್ಳುವ ಕೊನೆಯ ಪ್ರಯತ್ನವಾಗಿ ಈ ಕೆಲಸ ಮಾಡುತ್ತಿದ್ದೇನೆ. ಆತನ ಪುಸ್ತಕ ’ಆತ್ಮಕಥ’ ಅನುವಾದಿಸುತ್ತಿದ್ದೇನೆ. ಚಲಂನ ಬದುಕಿನ ಕಥೆ ಓದಲು ಚೆಂದವೇ ಹೊರತು ಆತ ಅನುಕರಣೀಯನಲ್ಲ. ಆತನಂತೆ ಬದುಕಲು ಯತ್ನಿಸಬೇಡಿ. ಹಾಗಂತ ಹೇಳಿಯೇ ಈ ಪುಸ್ತಕವನ್ನು ನಿಮ್ಮ ಕೈಗಿಡುತ್ತಿದ್ದೇನೆ. ಓದುವ ಸಂಕಟ ನಿಮ್ಮದಾಗಲಿ.

————————————————————————————————————–

Advertisements

11 Responses to ಪುಸ್ತಕಗಳು

 1. suresh shenoy ಹೇಳುತ್ತಾರೆ:

  plz give me detail of your books .i have u r lovelavike part-2 i wish to buy part1&3 its avilable
  plz rply me on my mail add
  thak u

 2. Manasa ಹೇಳುತ್ತಾರೆ:

  Hello,
  There are no information about the novels that he had published earlier. Like “Maatagati” and “Sarpasambhandha”. I have read almost all of his novels and for me these two have been all time favorites (Apart from “Bottom Item” that is). I wish you could do a write up on that too, if you have some time. Or is it there in this blog and I have missed it?
  If you remember, there was a column called “Akasha Butti” back in late 90’s. I am not sure if it has been published as a book, but it was very well written and the language used was amazing.
  I came here after reading the paper and I am glad that this site is published in the newspaper.
  Good going! I am going to be a frequent visitor of this site.
  (I will install Kannada font soon so that I can start commenting in Kannada only. Somehow, for stuff that Ravi writes, English language seems to be insufficient to express what I feel.)
  Regards,
  Manasa

 3. raj ಹೇಳುತ್ತಾರೆ:

  sir your very claver, i love your writting langvage, its realy coman, bcz, nanage nimma bagge ondu aase ede adenendre i want write with you. with your gidence.

 4. D.Kiran ಹೇಳುತ್ತಾರೆ:

  Respected sir, iam one of ur fan, have been impressed by ur story. couple of days back had called u and even had a talk regarding the same….. i always read ur books… iam such a big fan of urs that made me do a story frm a book called pappigala lokha dhalli… everything has been completed.. its very tuf to get the story done, u have suffered a lot to get the reality into the book called pappigala lokha dhalli, hats of sir….. from the same book have chossen a story which has come out good.

 5. thriputapriya ಹೇಳುತ್ತಾರೆ:

  Hi,

  Please find the one feedback about ‘avanobbanidda godse’.

  http://thriputa-priya.blogspot.com/2009/03/blog-post_04.html

  Regards,
  -t

 6. gayathri rao ಹೇಳುತ್ತಾರೆ:

  pritiya belagereyavare ‘nimma brahagalu nanage tumba ista . nanu malenadina ondu muleyalavalu . bidade sadyavadastu nimma lekana pustaka oduttene. devaru nimmannu chenngi idali

 7. kiran kumar ಹೇಳುತ್ತಾರೆ:

  preethiya ravi sir nimma ella pustakagalannu odiddene adeko tumba kadiddu matra hel hogu karana jagattinalli intha preetiyu iruttada antha nange ashcharya

 8. gururaj p.s ಹೇಳುತ್ತಾರೆ:

  Respected sir, iam one of ur fan,i have been impressed by ur books… devaru nimmannu chenngi idali
  Regards, gururaj padaki mysore

 9. VISHWANATH ಹೇಳುತ್ತಾರೆ:

  Dear sir ,

  nanu nim fan , adu o manasse patrikeinda , nanu bangalore ge bandu life alli lite agi stle agidini sir , adre nim o manase patrike sigtaella , siguv address heli plz sir ,

  VISHWA
  BIJAPUR

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: