ಒತ್ತಿ ಬಂದ ಅಭಿಮಾನಕ್ಕೆ ಅಕ್ಷರದ ಸಿಂಚನ

Ravi Belagere

“ಓದುತ್ತಿರುವ ಪುಸ್ತಕವನ್ನೊಮ್ಮೆ ಪಕ್ಕಕ್ಕಿಟ್ಟು ಕಣ್ಣಲ್ಲಿ ಒಸರುತ್ತಿರುವ ಕಣ್ಣೀರನ್ನು ಒರೆಸಿಕೊಂಡು ಪುನಃ ಓದುವಂತಾದರೆ ಅದೇ ನನಗೆ ಸಿಗುವ ಸಂತೃಪ್ತಿ”  ರವಿಬೆಳಗೆರೆಯವರು ಓದುಗರಿಂದ ಬಯಸುವ ಪ್ರತಿಕ್ರಿಯೆ ಇಷ್ಟೇ.  ಬರಹಗಾರ ಬರೆಯುವ ಯಾವುದೇ ಬರಹ ಓದುಗರ ಮೇಲೆ ಪ್ರಭಾವವನ್ನುಂಟು ಮಾಡಬೇಕು, ಓದುಗರ ಮನ ಕಲಕುವ, ಮನ ಸೆಳೆಯುವ, ಮನ ಸೂರೆಗೊಳ್ಳುವ ಶಕ್ತಿ ಕೇವಲ ರವಿಬೆಳಗೆರೆಯವರ ಬರಹಗಳಿಗೆ ಮಾತ್ರ ಇದೆ ಎಂದರೆ ಖಂಡಿತ ಅತಿಶಯೋಕ್ತಿ ಎನಿಸಲಾರದು.

ರವಿಬೆಳಗೆರೆಯವರ ಬಗ್ಗೆ, ಅವರ ಬರಹಗಳಲ್ಲಿರುವ ಮಾಂತ್ರಿಕ ಶಕ್ತಿಯ ಬಗ್ಗೆ, ಅವರ ಪುಸ್ತಕಗಳ ಬಗ್ಗೆ, ಲೇಖನಗಳ ಬಗ್ಗೆ, ಅವರ ಹಾಸ್ಯಪ್ರಜ್ಞೆಯ ಬಗ್ಗೆ, ಓದುಗರೆಡೆಗಿನ ಅವರ ಕಳಕಳಿಯ ಬಗ್ಗೆ, ಅವರ ನಿಲುವುಗಳ ಬಗ್ಗೆ ಹಾಗೂ ಕೊಂಚ ನನ್ನ ಬಗ್ಗೆ ಈ ವೆಬ್ ಬ್ಲಾಗಿನಲ್ಲಿ ಮಾಹಿತಿಗಹಳನ್ನು ಕಾಲ ಕಾಲಕ್ಕೆ ಪ್ರಕಟಿಸುವ ಸಣ್ಣ ಪ್ರಯತ್ನ ನನ್ನದು.

ರವಿಬೆಳಗೆರೆಯವರ ಸಾರಥ್ಯದಲ್ಲಿ ಮೂಡಿಬರುವ ವಾರಪತ್ರಿಕೆ ಹಾಯ್ ಬೆಂಗಳೂರ್‍ ಕೇವಲ ಕ್ರೈಂಗೆ ಸಂಬಂಧಿಸಿದ ಸುದ್ದಿಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಇನ್ನೂ ಕೆಲವರ ಅಭಿಪ್ರಾಯವಾಗಿದೆ. ಕ್ರೈಂ ಸುದ್ದಿಗಳನ್ನು ಹೊರತುಪಡಿಸಿ ಓದುಗರನ್ನು ಚಿಂತನೆಗೆ ಹಚ್ಚುವ, ಓದುಗರಲ್ಲಿ ಮನೋಲ್ಲಾಸ ಉಂಟು ಮಾಡುವ, ತಿಳುವಳಿಕೆ ಮೂಡಿಸುವ, ಕಚಗುಳಿ ಇಡುವ ಹಲವಾರು ರೀತಿಯ ಲೇಖನಗಳು ಪ್ರಕಟವಾಗಿವ ಪತ್ರಿಕೆ ಹಾಯ್ ಬೆಂಗಳೂರ್‍. ಇದಕ್ಕೆ ಪ್ರತಿಸ್ಪರ್ದೆ ಒಡ್ಡುವ ಅಥವಾ ಸರಿಸಾಟಿಯಾದ ಮತ್ತೊಂದು ವಾರಪತ್ರಿಕೆ ಇಲ್ಲ ಎಂಬುದು ಸರ್ವವಿಧಿತ. ಅದೇ ರೀತಿ ರವಿಬೆಳಗೆರೆಯವರು ಹೊರ ತಂದಿರುವ ಹಲವಾರು ಪುಸ್ತಕಗಳೂ ಸಹಾ ಪ್ರತಿಯೊಬ್ಬ ವ್ಯಕ್ತಿಯೂ ಓದಲೇ ಬೇಕಾದಂತಹುವುಗಳು. ಇಂಗ್ಲಿಷ್ ಸೇರಿದಂತೆ ಇನ್ನಿತರ ಭಾಷೆಗಳಲ್ಲಿನ ಆಯ್ದ ಉತ್ತಮ ಕೃತಿಗಳನ್ನು ತಮ್ಮ ಎಂದಿನ ಆಕರ್ಷಕ ಶೈಲಿಯಲ್ಲಿ ಕನ್ನಡಕ್ಕೆ ಅನುವಾದಿಸಿ ಅವನ್ನು ಓದುಗರಿಗೆ ಸಂಭ್ರಮದಿಂದ ನೀಡುವ ರವಿಬೆಳಗೆರೆಯವರ ಕಳಕಳಿ ಖಂಡಿತ ಪ್ರಶಂಸನೀಯ. ತಮ್ಮ ಅನಾರೋಗ್ಯದ ನಡುವೆಯೂ ದಿನದ ೧೮ ಗಂಟೆಗಳು ಕಾರ್ಯನಿರತರಾಗಿರುವ ಇವರ ಅವಿರತಶ್ರಮ, ಛಲ, ಆತ್ಮವಿಶ್ವಾಸ, ಏಕಾಗ್ರತೆ, ಅನುಕರಣೀಯ.

ತಮ್ಮ ಬರಹಗಳಿಗೆ ಸಂಪೂರ್ಣ ಹಕ್ಕುದಾರರಾಗಿರುವ ಬೆಳಗೆರೆಯವರ ಬರಹಗಳನ್ನು ಇಲ್ಲಿ ಪ್ರಕಟಿಸುವಲ್ಲಿ ಕಾನೂನಿನ ತೊಡಕಿನ ಬಗ್ಗೆ ಯೋಚಿಸಿದ್ದರೂ ಸಹಾ ಅವರ ಅಭಿಮಾನಿಯೆಂಬ ಸಲಿಗೆಯಿಂದ ಈ ಪ್ರಯತ್ನವನ್ನು ಕೈಗೆತ್ತಿಕೊಂಡಿದ್ದೇನೆ. ಹಾಗೆಂದು ರವಿಬೆಳಗೆರೆಯವರ ಎಲ್ಲಾ ಬರಹಗಳನ್ನು ಮತ್ತು ಪ್ರಕಟಿತವಾದ ಪುಸ್ತಕಗಳನ್ನು ಇಲ್ಲಿ Upload ಮಾಡಲಾಗುವುದಿಲ್ಲ. ಇವರ ಬರಹಗಳಲ್ಲಿ ಆಯ್ದ ಕೆಲವು ಲೇಖನಗಳನ್ನಷ್ಟೇ ಇಲ್ಲಿ ಬಿತ್ತರಿಸಲಾಗುವುದು. ಇವರು ಹೊರತಂದಿರುವ ಪುಸ್ತಕಗಳ ಮಾಹಿತಿ ಮಾತ್ರ ಇಲ್ಲಿ ಲಭ್ಯ. ರವಿಬೆಳಗೆರೆಯವರನ್ನೊಳಗೊಂಡಂತೆ ಓದುಗ ಬಳಗ ನನ್ನ ಈ ಪ್ರಯತ್ನಕ್ಕೆ ತಮ್ಮ ದನಿಗೂಡಿಸುವರೆಂಬ ಆಶಯದೊಂದಿಗೆ…..

-ಒಬ್ಬ ಭಾವುಕ ಓದುಗ

ಎಲ್ಲೋ ಹುಟ್ಟಿ ಮತ್ತಿನ್ನೆಲ್ಲೆಲ್ಲೋ ಹರಿದು ಕೊನೆಗೆಲ್ಲೋ ಹೋಗಿ ಸೇರುವ ನದಿಯಂತೆ ರವಿಬೆಳಗೆರೆ ಯವರ ಜೀವನ ಸಹಾ ಹಲವಾರು ಏಳು ಬೀಳುಗಳನ್ನು ಕಂಡಿದೆ. ಇವರ ಹಿನ್ನೆಲೆಯ ಬಗ್ಗೆ ರವಿ ಬೆಳಗೆರೆಯವರೇ ಈ ರೀತಿ ಹೇಳಿಕೊಂಡಿದ್ದಾರೆ.

“ಬರವಣಿಗೆಯೊಂದರಿಂದಲೇ ಅನ್ನ ಮತ್ತು ಆತ್ಮ ಸಂತೋಷ ದುಡಿದುಕೊಳ್ಳಲು ತೀರ್ಮಾನಿಸಿದಂತೆ ಬದುಕುತ್ತಿರುವವನು ನಾನು. ಬರವಣಿಗೆ ಬಿಟ್ಟು ಬೇರೇನನ್ನೂ ಮಾಡಲು ನನಗೆ ಬಾರದು ಅಂತ ತೀರ್ಮಾನಿಸಿ ಆಗಿದೆ.”

“ನನಗೀಗ ೫೧ ವರ್ಷ ವಯಸ್ಸು. ಹುಟ್ಟಿದ್ದು ೧೯೫೮ ರ ಮಾರ್ಚ್ ೧೫ ರಂದು, ಬಳ್ಳಾರಿಯಲ್ಲಿ. ಎರಡು ವರ್ಷ ತುಮಕೂರಿನ ಸಿದ್ದಗಂಗಾ ಹೈಸ್ಕೂಲಿನಲ್ಲಿ ಒದಿದ್ದನ್ನು ಬಿಟ್ಟರೆ ಬಿ.ಎ. ವರೆಗಿನ ವ್ಯಾಸಾಂಗ ನಡೆದಿದ್ದು ಬಳ್ಳಾರಿಯಲ್ಲಿ. ನಂತರರ ಓದಿದ್ದು ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಗಾಗಿ ಧಾರವಾಡದಲ್ಲಿ. ಕೆಳಕಾಲ ಬಳ್ಳಾರಿ, ಹಾಸನ ಮತ್ತು ಹುಬ್ಬಳಿಯ ಕಾಲೇಜುಗಳಲ್ಲಿ ಇತಿಹಾಸ ಉಪನ್ಯಾಸಕನಾಗಿ ಕೆಲಸ ಮಾಡಿದೆ. ಅದಕ್ಕೆ ಮುಂಚೆ ಮತ್ತು ಅದರ ನಂತರ ಸರಿಸುಮಾರು ೯ ವೃತ್ತಿ ಬದಲಿಸಿದೆ. ಹೈಸ್ಕೂಲ್ ಮೇಷ್ಟ್ರು, ಹೋಟೆಲ್ ಮಾಣಿ, ರೂಂ ಬಾಯ್, ರಿಸೆಪ್ಷನಿಸ್ಟ್, ಹಾಲು ಮಾರುವ ಗೌಳಿ, ದಿನಪತ್ರಿಕೆ ಹಂಚುವ ಹುಡುಗ, ಮೆಡಿಕಲ್ ರೆಪ್ರೆಸೆಂಟೇಟಿವ್, ಪ್ರಿಂಟಿಂಗ್ ಪ್ರೆಸ್ ಮಾಲೀಕ, ಥಿಯೇಟರಿನಲ್ಲಿ ಗೇಟ್ ಕೀಪರ್‍, ಕಾಲೇಜಿನಲ್ಲಿ ಉಪನ್ಯಾಸಕ, ಮನೆಪಾಠದ ಮೇಷ್ಟ್ರು ಹೀಗೆ ನಾನಾ ಕಡೆ ಮೈಕೈ ಮೆತ್ತಗಾಗಿಸಿಕೊಂಡು ದುಡಿದೆ. ಕರ್ನಾಟಕದ ಅಷ್ಟೂ ಪತ್ರಿಕೆಗಳಿಗೆ ಬರೆದೆ. ಅನೇಕ ಪತ್ರಿಕೆಗಳಿಗೆ ಕೆಲಸ ಮಾಡಿದೆ. ತುಂಬಾ ಚಿಕ್ಕವಯಸ್ಸಿಗೇ ನನಗಿಂತ ಜಾಸ್ತಿ ವಯಸ್ಸಾದ ಪತ್ರಿಕೆಗಳಿಗೆ ಸಂಪಾದಕನಾದೆ. ಈ ತನಕ ಸರಿ ಸುಮಾರು ೨೫ ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿದೆ. ಖುಷ್ವಂತ್ ಸಿಂಗ್, ಛಲಂ, ಪ್ರತಿಮಾ ಬೇಡಿ, ಬ್ರಿಗೇಡಿಯರ್‍ ಜಾನ್ ಪಿ ದಳವಿ, ಗೇಬ್ರಿಯಲ್  ಗಾರ್ಸಿಯಾ ಮಾರ್ಕ್ ವೇಜ್, ವಿನೋದ್ ಮಹ್ತಾ ಮುಂತಾದವರ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ. ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿಯವರು ಪ್ರಶಸ್ತಿ ಕೊಟ್ಟಿದ್ದಾರೆ. ಸಣ್ಣ ಕಥೆ ನನ್ನ ಅತೀ ಇಷ್ಠವಾದ ಪ್ರಕಾರ. ಅದರಲ್ಲೂ ಪ್ರಶಸ್ತಿ ಬಹುಮತಿಗಳು ಬಂದಿದೆ. ಸದ್ಯಕ್ಕೆ ನಾನು ’ಹಾಯ್ ಬೆಂಗಳೂರ್‍!’ ಕನ್ನಡ ವಾರಪತ್ರಿಕೆಯ ಹಾಗೂ ”ಓ ಮನಸೇ’ ಪಾಕ್ಷಿಕದ ಸಂಪಾದಕ. ಪ್ರಾರ್ಥನಾ ಎಜುಕೇಷನ್ ಸೊಸೈಟಿಯ ಸಂಸ್ಥಾಪಕ ಕಾರ್ಯದರ್ಶಿ. ಒಬ್ಬ ಹೆಂಡತಿ ಮೂವರು ಮಕ್ಕಳ ತಂದೆ. ನನ್ನ ಬಗೆಗಿನ ಉಳಿದ ವಿವರಗಳು ಅನ್ ಇಂಟರೆಸ್ಟಿಂಗ್.”

-ರವಿ ಬೆಳಗೆರೆ

8 Responses to ಒತ್ತಿ ಬಂದ ಅಭಿಮಾನಕ್ಕೆ ಅಕ್ಷರದ ಸಿಂಚನ

  1. ಶೆಟ್ಟರು (Shettaru) ಹೇಳುತ್ತಾರೆ:

    ಕಾಯುತ್ತೆನೆ.. ಓದಲು

    -ಶೆಟ್ಟರು

  2. vinayaka kodsara ಹೇಳುತ್ತಾರೆ:

    ಅಕ್ಷರ ಮಾಂತ್ರಿಕರಿಗೆ ಬ್ಲಾಗ್ ಲೋಕಕ್ಕೆ ಸ್ವಾಗತ…ಚೆಂದದ ಬರಹಗಳಿಗೆ ಕಾಯುವೆ. ಹಾಯ್‌ನಲ್ಲಿ ಓದುವ ಖಾಸ್ ಬಾತ್, ಬಾಟಮ್, ಮಿಡಲ್ ಐಟಂಗಳನ್ನು ಹೊರತುಪಡಿಸಿದ ಬರಹಗಳು ಹರಿದು ಬರಲಿ…!!!
    ಅಭಿಮಾನದಿಂದ…
    ವಿನಾಯಕ ಕೋಡ್ಸರ

    • ravibelagere ಹೇಳುತ್ತಾರೆ:

      ರವಿಬೆಳಗೆರೆಯವರ ಅಭಿಮಾನಿಯಾಗಿ ನಿಮ್ಮ ಸಲಹೆ ಮಾರ್ಗದರ್ಶನಕ್ಕೆ ತುಂಬು ಹೃದಯದ ಸ್ವಾಗತ. ಬ್ಲಾಗ್ ಬಂಧ ನಮ್ಮ-ನಿಮ್ಮ ನಡುವೆ ನಿರಂತರವಾಗಿರಲಿ. ಅಭಿಮಾನ ಚಿರಾಯುವಾಗಲಿ……

  3. Krishna Swamy M B ಹೇಳುತ್ತಾರೆ:

    I am very happy to see a kannada blog, that too for Hi Bangalore / Mr. Ravi Belagere. Thanks for same & pl. continue this activity & I will continue to visit the blog site.

    Krishna.

  4. Surendra Nadig ಹೇಳುತ್ತಾರೆ:

    i am a huge fan of u… and sincere reader of hai and manase.. still in mood of THE MEN WHO KILLED GANDHI

  5. vinay ಹೇಳುತ್ತಾರೆ:

    inthaha ondu blog bekittu ……….kottiddakke thanks…..all the best ………………

  6. ಅರೆಯೂರು ಚಿ.ಸುರೇಶ್ ಪತ್ರಕರ್ತರು, ಅ.ವೈದ್ಯನಾಥಪುರ-೫೭೨೧೧೮ ಅರೆಯೂರು ಅಂಚೆ ತುಮಕೂರು ತಾ.,ಜಿಲ್ಲೆ. ಹೇಳುತ್ತಾರೆ:

    ನಿವೇದನೆ ಓ ನನ್ನ ಕಾವ್ಯಕನ್ನಿಕೆ ನಿನ್ನ ಜಿಂಕೆ ಕಂಗಳ ಮಿಂಚು ಸಾಟಿಯೇ ನೂರುದೀಪಗಳ ಬೆಳಕಿಗೆ ? ನಿನ್ನೀ ಜೋಡಿ ನಕ್ಷತ್ರಗಳ ಕಾಂತಿಯಲಿ ನಿನಗಾಗಿ ಕಾದು ನಿನಗಾಗಿ ಕಾತರಿಸಿ ನೀ ಬರುವ ಹಾದಿಯಲಿ ಕಾಯುತ್ತ ಕುಳಿತಿರುವ ಈ ನಿನ್ನಾರಾದಕನ ಮೇಲೂ ನಿನ್ನ ಕಂಗಳ ಬೆಳಕ ಚೆಲ್ಲೇ ಗೆಳತಿ

Leave a reply to vinay ಪ್ರತ್ಯುತ್ತರವನ್ನು ರದ್ದುಮಾಡಿ