ಕಚಗುಳಿಗೆ ಸಿದ್ದರಾಗಿ…ಕೇಳಿ! ಓದುವಂತವರಾಗಿ…

ರವಿಬೆಳಗೆರೆಯವರ ಸಾರಥ್ಯದ ಪತ್ರಿಕೆ ಹಾಯ್ ಬೆಂಗಳೂರ್‍! ನ ಪ್ರಶ್ನೋತ್ತರ ಮಾಲಿಕೆ ಕೇಳಿ! ಗೆ ನಮ್ಮ ಬ್ಲಾಗಿನಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಕೇಳಿ! ಯ ಕಚಗುಳಿಗೆ ನುಗುತ್ತಿರುವವರೆಷ್ಟು ಮಂದಿಯೋ. ಆದ್ದರಿಂದಲೇ ಕೇಳಿ! ಅಂಕಣಕ್ಕಾಗಿ ಪ್ರತ್ಯೇಕವಾದ ಲಿಂಕ್ ಪೇಜ್ ಅನ್ನು ಈ ಬ್ಲಾಗಿನಲ್ಲಿ ಅಳವಡಿಸಿರುತ್ತೇನೆ. ಹಾಗೆಯೇ ಕೇಳಿಯ ಪ್ರಶ್ನೋತ್ತರ ಮಾಲಿಕೆಯನ್ನು ಬ್ಲಾಗಿನ ಮೈನ್ ಪೇಜ್ ನಲ್ಲಿಯೂ ಸಹಾ ಪ್ರಕಟಿಸಲಾಗುತ್ತಿದೆ.  ಓದುವ ಆನಂದ ನಿಮದಾಗಲಿ…ಪ್ರತಿಕ್ರಿಯೆ ನಿರಂತರವಾಗಿ ಹರಿದುಬರಲಿ..

-ಭಾಸ್ಕರ್‍

ಕೇಳಿ-೨

ಪ್ರಶ್ನೆ: ನಾನು ಹೆಂಡತಿ ಹೇಳಿದ್ದಕ್ಕೆಲ್ಲ ಆಯ್ತು ಅಂತಿರ್ತೀನಿ. ನೀವು?

ಉ: ’ಆಯ್ತು’ ಅನ್ನೋ ತಂಕಾ ಹೇಳ್ತಾನೇ ಇರ್‍ತಾಳೆ!

ಪ್ರಶ್ನೆ: ನಾಲ್ಕು ತಿಂಗಳಿಗೆ ಮುಂಚೇನೇ ಬಾಂಬೆ ಬ್ಲಾಸ್ಟ್ ಬಗ್ಗೆ ಬ್ಲಾಸ್ಟ್ ಬಗ್ಗೆ ಗೌಡರಿಗೆ ಕನಸು ಬಿದ್ದಿತ್ತಂತೆ?

ಉ: ಅದಕ್ಕೇ, ಕಸಬ್ ಸಿಗ್ಹಾಕ್ಕೊಂಡ ಕೂಡಲೇ ಅವರು ’ಕುಮಾರಾ’ ಅಂತ ಚೀರಿದ್ದು!

ಪ್ರಶ್ನೆ: ಚೆಂಡನ್ನು ಕ್ರಿಕೆಟ್ ಬೌಲರ್‍ಗಳು ಅಂಡಿಗೆ ಏಕೆ ತಿಕ್ಕುತ್ತಿರುತ್ತಾರೆ?

ಉ: ಫುಟ್ ಬಾಲ್ ಆಟಗಾರರನ್ನು ಅವರು ಅಣಕಿಸುವುದೇ ಹಾಗೆ.

ಪ್ರಶ್ನೆ: ಬಿಳಿ ಸೂಟ್ ಹಾಕಿಕೊಂಡರೆ ದೇವೇಗೌಡರು ಹೇಗೆ ಕಾಣಬಹುದು?

ಉ: ಸೂಟು ಮಾನನಷ್ಟ ಮೊಕದ್ದಮೆ ಹೂಡಬಹುದು!

ಪ್ರಶ್ನೆ: ಹೆಂಡತಿಗೂ ಹೇಳಲಾಗದ ಸತ್ಯ ಸಂಗತಿ ಯಾವುದು?

ಉ: ದಡ್ಡಾ, ಯಾವ ಸತ್ಯಸಂಗತಿಯನ್ನೂ ಹೇಳಬಾರದವಳೇ ಹೆಂಡತಿ!

ಪ್ರಶ್ನೆ: ಹುಡುಗರ ಹಾಗೇ ಹುಡುಗೀರೂ ಪೋಲಿ ಬೀಳೋದುಂಟೇ?

ಉ: ವಯಸ್ಸಿಗೆ ಬಂದ ಹುಡುಗರು ಅಥವರನ್ನ ’ದಾರಿಗೆ ಬಂದ್ಲು’ ಅಂತಿರ್ತಾರೆ!

ಪ್ರಶ್ನೆ: ಐದು ವರ್ಷದ ಮೇಲ್ಪಟ್ಟವರಿಗೆ ಪೋಲಿಯೋ ಡ್ರಾಪ್ಸ್ ಹಾಕಿದರೆ ಏನಾಗುತ್ತೆ?

ಉ: ಚಿಕ್ಕವನಿದ್ದಾಗಲೇ ಇದನ್ನೆಲ್ಲ ಮುಗಿಸಬಾರದಾಗಿತ್ತಾ ಅಂತ ರೇಗಿದ್ನಂತೆ ಕುಮಾರಣ್ಣ.

ಪ್ರಶ್ನೆ: ಪುಸ್ತಕದಲ್ಲಿ ನವಿಲುಗರಿ ಬದಲು ಕಾಗೆ ಪುಕ್ಕ ಇಟ್ಟುಕೊಂಡ್ರೆ?

ಉ: ರಾಧಿಕಾ…ಅಂತ ಹೋದಾಗ ಚೆನ್ನಿಗಪ್ಪ ತಬ್ಕೊಂಡ ಹಾಗಿರುತ್ತೆ!

ಪ್ರಶ್ನೆ: ನಿನ್ನ ಆತ್ಮಕಥೆಯನ್ನು ನಿರೀಕ್ಷಿಸಬಹುದೆ?

ಉ: ಪರೀಕ್ಷಿಸಿದರೆ ಮಾತ್ರ ಫಜೀತಿ!

ಪ್ರಶ್ನೆ: ಚುನಾವಣೆ ಆದ ಮೇಲೆ ಮಕಾಡೆ ಮಲಗಿದ ಗೌಡರು ಎದ್ದೇ ಇಲ್ಲವಂತೆ?

ಉ: ’ಸ್ಲೀಪಿಂಗ್ ಸ್ಲೀಪಿಂಗ್ ಯಸ್ ಪಾಪ್ಪಾ’ ಅಂತ ರೇವಣ್ಣ ಸುತ್ತ ಕುಣಿಯುತ್ತಿದ್ದಾನಂತೆ?

ಕೇಳಿ-೩

ಪ್ರಶ್ನೆ: ಅನಿತಕ್ಕನ್ನ ಮುಖ್ಯಮಂತ್ರಿ ಮಾಡೋವರೆಗೂ ಗೌಡರು ನಿದ್ರಿಸುವುದಿಲ್ಲವಂತೆ?

ಉ: ಹೀಗಾಗಿಯೇ ಆ ಪರಿ ತೂಕಡಿಸೋದು!

ಪ್ರಶ್ನೆ: ದೇವೇಗೌಡರನ್ನು ರಾಜಕೀಯದ ’ಶಕುನಿ’ ಅಂತಾರಲ್ಲ?

ಉ: ಅವಿವೇಕಿಗಳ್ಯಾರೋ ಮಧ್ಯೆ ’ಕು’ ಸೇರಿಸಿದ್ದಾರೆ!

ಪ್ರಶ್ನೆ: ಮುಖ್ಯಮಂತ್ರಿ ಯಡಿಯೂರಪ್ಪ ಯಾಕೆ ಸೂಟ್ ಧರಿಸುವುದಿಲ್ಲ?

ಉ: ಕೃಷ್ಣಯ್ಯ ಶೆಟ್ಟಿ ಥರಾ ಕಾಣ್ತೀರಿ ಅಂತ ಆಡ್ಕೊಂಡು ನಕ್ಕರೆ ಗತಿ?

ಪ್ರಶ್ನೆ: ’ಅಪ್ಪಾ ತಂದೇ, ಬಿಕ್ಷ ನೀಡೀ’ ಅಂತೇಕೆ ಭಿಕ್ಷುಕರು ಕೂಗುವುದಿಲ್ಲ?

ಉ: ಅವನು ಅಡುಗೆ ಮಾಡಿಟ್ಟು ಆಗಲೇ ಹೊರಟು ಬಿಟ್ಟಿರುತ್ತಾನೆ ನೋಡಿ?

ಪ್ರಶ್ನೆ: ದೇವೆಗೌಡರನ್ನು ಉಕ್ಕಿನ ಮನುಷ್ಯ ಅಂದರೆ ನಿಮಗೇನನ್ನಿಸುತ್ತದೆ?

ಉ: ಉಕ್ಕು, ವಜ್ರ, ಹಿತ್ತಾಳೆ ಬೇಕಾದ್ದನ್ನಿ: ಮನುಷ್ಯ ಅಂದರೆ ಮಾತ್ರ ನನ್ನ ತಕರಾರಿದೆ!

ಪ್ರಶ್ನೆ: ದೇವೇಗೌಡರು ಒಮ್ಮೆಯೂ ಯಾಕೆ ವಿಗ್ ಬಳಸಲಿಲ್ಲ?

ಉ: ಚೌರಿಕೂದ್ಲು ತರ್‍ತೀನಿ ಅಂತ ಹೋದ ಚೆನ್ನಿಗ ಪಕ್ಷವನ್ನೇ ಬಿಟ್ಟನಲ್ಲ?

ಪ್ರಶ್ನೆ: ಆಪರೇಷನ್ ಕಮಲ ಮಾಡಿದ್ದಕ್ಕೇ ಯಡ್ಡಿಗೆ ಡಾಕ್ಟರೇಟು ಕೊಟ್ಟರಂತೆ ಹೌದಾ?

ಉ: ನಂಗೆ ’ನೈಟಿ’ಂಗೇಲ್ ಪ್ರಶಸ್ತಿ

ಪ್ರಶ್ನೆ; ಉಗ್ರವಾದಿಗಳನ್ನು ನಮ್ಮ ಬುದ್ದಿ ಜೀವಿಗಳೇಕೆ ಖಂಡಿಸಿಲ್ಲ?

ಉ:ಅವರು ಹಾರಿಸಿದ ಗುಂಡು ಇವರ ಅಂಡಿಗಿನ್ನು ತಾಕಿಲ್ಲ!

ಪ್ರಶ್ನೆ:ನಾವು ಬೆತ್ತಲಾದರೆ ಜಗತ್ತೂ ಬೆತ್ತಲಾದೀತೇ?

ಉ:ಅದನ್ನು ಗಮನದಲ್ಲಿಟ್ಟುಕೊಂಡೇ ಪ್ರತಾಪಸಿಂಹನಿಗೆ ಪಿಂಕ್ ಚೆಡ್ಡಿ ಕೊಡಿಸಲಾಗಿದೆ.

ಪ್ರಶ್ನೆ: ಶೃತಿಯ ಮುಂದಿನ ಸಿನಿಮಾ ಯಾವುದು?

ಉ: ನಿಗಮವು ಎಲ್ಲೋ: ಗಮನವು ಎಲ್ಲೋ!

Advertisements

One Response to ಕಚಗುಳಿಗೆ ಸಿದ್ದರಾಗಿ…ಕೇಳಿ! ಓದುವಂತವರಾಗಿ…

  1. chandrashekhar ಹೇಳುತ್ತಾರೆ:

    manyare, sahasraru namma abhimanigala sankyeyalli nanu obba. nanna prashne ballary reddy gala sokku yavaga muriyutte???????

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: