ಕಳೆದ ವಾರ ಬಂದಿದ್ದ ಮೆಸೇಜು ಓದಿದ ಮೇಲೆ!

ಓ ೭೩

’ಉಹುಂ, ಸಾಲದು. ’ಓ ಮನಸೇ…’ ಪತ್ರಿಕೆಯಲ್ಲಿ ಇನ್ನೂ ಉತ್ತಮ ಮಟ್ಟದ ಲೇಖನಗಳನ್ನು ನಿರೀಕ್ಷಿಸುತ್ತೇನೆ’ ಎಂದು ಅಪರಿಚಿತ. ಅಗೋಚರ ಓದುಗರೊಬ್ಬರು ನನಗೆ ಕಳೆದ ವಾರ ಮೆಸೇಜ್ ಕಳುಹಿಸಿದ್ದರು. ಅಲ್ಲಿಂದ ಶುರುವಾಯಿತು ನನ್ನ ಚಡಪಡಿಕೆ. ನೀವು ಎಷ್ಟರ ಮಟ್ಟಿಗೆ ನಂಬುತ್ತೀರೋ ಬಿಡುತ್ತೀರೋ ಗೊತ್ತಿಲ್ಲ: ನನ್ನ ಪತ್ರಿಕೆಯ ನಿಲುವನ್ನು ಯಾರಾದರೂ ಖಂಡಿಸಿದರೆ ನಾನು ಅದನ್ನು ಸ್ವಾಗತಿಸುತ್ತೇನೆ, ಟೀಕಿಸಿ ಬರೆದ ಪತ್ರಗಳನ್ನು ಶ್ರದ್ದೆಯಿಂದ ಓದಿಕೊಳ್ಳುತ್ತೇನೆ. ನಾನು ತಪ್ಪು ಮಾಡಿದ್ದೇನೆ ಅಂತ ಓದುಗ ಸೂಚಿಸಿದಾಗ ತಿದ್ದುಕೊಳ್ಳುತ್ತೇನೆ, ಕ್ಷಮೆ ಕೇಳುತ್ತೇನೆ. ಆದರೆ ನಾನು ಕೈಗಿತ್ತ ’ಪತ್ರಿಕೆ’ ಸಂತೃಪ್ತಿಕರವಾಗಿಲ್ಲ ಅನ್ನಿಸಿದಾಗ ಮಾತ್ರ ತಳಮಳಗೊಂಡು ಬಿಡುತ್ತೇನೆ. ಅದು ನನ್ನ Product. ಕಳೆದ ಇಪ್ಪತ್ತೈದು ಮೂವತ್ತು ವರ್ಷಗಳಲ್ಲಿ ನಾನು ಮಾಡಿದ ಅತ್ಯಂತ ಶ್ರದ್ದಾವಂತ ಕೆಲಸವೆಂದರೆ, ಬರವಣಿಗೆಯೊಂದೇ. ನನ್ನ ಈ ಕೆಲಸದ ಬಗ್ಗೆ ನಾನು ಭಯಂಕರ ಪೊಸೇಸೀವ್. ಅಷ್ಟೂ ನಾನೇ ಬರೆಯಬೇಕು, ನನ್ನ ಕಣ್ತಪ್ಪಿ ಯಾವುದೂ ಪ್ರಿಂಟಿಗೆ ಹೋಗಬಾರದು, ಎಲ್ಲೂ ರುಚಿ ಕೆಡಬಾರದು ಅಂತ ಹಟಕ್ಕೆ ಬೀಳುವುದರಿಂದಲೇ ಕೆಲವೊಮ್ಮೆ ಪತ್ರಿಕೆ, ಪುಸ್ತಕ ತಡವಾಗಿ ಅಚ್ಚಿಗೆ ಹೋಗುತ್ತವೆ. ಅದರಿಂದ ಪ್ರಸಾರ ಸಂಖ್ಯೆಯ ಮೇಲೆ ಪರಿಣಾಮವಾಗುತ್ತದೆ ಅಂತ ನಿವೇದಿತಾ ಬಯ್ಯುತ್ತಾಳೆ. ಆದರೆ ಕಳೆದ ಹದಿನೈದು ವರ್ಷಗಳಲ್ಲಿ ನಾನು ನನ್ನ ಓದುಗರನ್ನು ಕಳೆದುಕೊಂಡಿಲ್ಲ. ಹೋಟೇಲಿನ ಬಾಗಿಲು ತೆರೆಯುವುದು ಕೊಂಚ ತಡವಾದರೇನಂತೆ? ಕಾಫಿಯ ಸೊಗಸು ನಿರೀಕ್ಷಿಸಿದಂತೇ ಇದ್ದರೆ ಬೇಸರಿಸದ ದೊರೆ, ಕಾಫಿ ಕುಡಿದುಕೊಂಡೇ ಮುನ್ನಡೆಯುತ್ತಾನೆ.

ಅದಿರಲಿ, ಕಳೆದವಾರ ಬಂದ ಮೆಸೇಜು ನನ್ನನ್ನು ನಿಜಕ್ಕೂ ತಳಮಳಕ್ಕೆ ಈಡು ಮಾಡಿತ್ತು. ಒಂದು ಸಲ ಕುಳಿತು ಹಳೆಯ ಸಂಚಿಕೆಗಳನ್ನೆಲ್ಲ ತಿರುವಿ ಹಾಕಿದೆ. ಓದುಗ ದೊರೆ ಯಾವುದನ್ನು miss ಮಾಡಿಕೊಳ್ಳುತ್ತಿದ್ದಾನೆ ಅಂತ ಗಮನಿಸಿದೆ. ಆಮೇಲೆ ಬೇರೆ ಬೇರೆ ಭಾಷೆಗಳ ಕೆಲವು ಪತ್ರಿಕೆಗಳನ್ನು ತರಿಸಿಕೊಂಡು ನೋಡಿದೆ. ಇಂಟರ್‍‌ನೆಟ್‌ನಲ್ಲಿ ಸಿಗುವ ವಿಶೇಷ ಮ್ಯಾಗಝೀನ್‌ಗಳನ್ನು ಓದಿಕೊಂಡೆ. ಆ ನಂತರವೇ ನಾನು ’ಓ ಮನಸೇ..’ ಪತ್ರಿಕೆಯ ೭೩ ನೇ ಸಂಚಿಕೆಯ ಸೃಷ್ಟಿಗೆ ಕುಳಿತಿದ್ದು. ಈಗಾಗಲೇ ಅದು ಮಾರುಕಟ್ಟೆಯಲ್ಲಿದೆ. ನೀವು ಪ್ರೀತಿಯಿಂದ ಓದುತ್ತೀರಿ ಎಂಬ ವಿಶ್ವಾಸ ನನಗಿದೆ. ಸಧಬಿರುಚಿಯ, ವಿಷಯ ವೈವಿದ್ಯತೆಯುಳ್ಳ ಆ ಪತ್ರಿಕೆ ಬೆಳೆಯಬೇಕು. ನನ್ನ ನಂತರವೂ ಅದು ನನ್ನ ನೆನಪಾಗಿ ಉಳಿಯಬೇಕು.

ನಿಮ್ಮಲ್ಲಿ ಮತ್ತೆ ಅದನ್ನೇ ವಿನಂತಿಸಿಕೊಳ್ಳುತ್ತೇನೆ. ನಿಮ್ಮ ಮೂವರ ಮಿತ್ರರಿಗೆ ’ಓ ಮನಸೇ…’ ಪತ್ರಿಕೆಯನ್ನು ಪರಿಚಯಿಸಿ.

-ಬೆಳಗೆರೆ

Advertisements

One Response to ಕಳೆದ ವಾರ ಬಂದಿದ್ದ ಮೆಸೇಜು ಓದಿದ ಮೇಲೆ!

  1. ravibelagere ಹೇಳುತ್ತಾರೆ:

    ರಾಜು,
    ನಿಮ್ಮ ಪತ್ರಗಳಿಗೆ ಉತ್ತರಿಸುವುದೇ ಇಲ್ಲ ಎಂಬುದೇ ನಿಮ್ಮ ಠೀಕೆಯಾ..? ಯಾವುದೇ ಒಂದು ಠೀಕೆ ವಿನಾಕಾರಣವಾಗಿದ್ದರೆ ಅದನ್ನು ನಿರ್ಲಕ್ಷಿಸುವುದು ಆರೋಗ್ಯಕರ ಲಕ್ಷಣ. ಠೀಕೆಯಲ್ಲೂ ಸಹಾ ಏನಾದರೂ ಗಮನಿಸುವಂತಹ ಅಂಶಗಳಿದ್ದರೆ ಖಂಡಿತ ಅದನ್ನು ಬೆಳಗೆರೆಯವರು ಉತ್ತರಿಸುತ್ತಿದ್ದರು. ಅನಗತ್ಯವಾದ ಈ ರೀತಿಯ ಪೊಳ್ಳು ಠೀಕೆಗಳನ್ನು ಕಳುಹಿಸುವ ಬದಲು ಬೆಳಗೆರೆಯವರ ಯಾವುದಾದರೂ ಒಂದು ಪುಸ್ತಕವನ್ನು ಕುಳಿತು ಓದಿ ಅದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಇದರ ಮೂಲಕ ಒಂದು ಆರೋಗ್ಯಕರ ಚರ್ಚೆ ನಡೆಯಲಿ..ಏನಂತೀರಾ..?
    -ಭಾಸ್ಕರ್‍

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: