ನಮ್ಮ ಬಗ್ಗೆ

ಒತ್ತಿ ಬಂದ ಅಭಿಮಾನಕ್ಕೆ ಅಕ್ಷರದ ಸಿಂಚನ

Ravi

ರವಿ ಬೆಳಗೆರೆ

“ಓದುತ್ತಿರುವ ಪುಸ್ತಕವನ್ನೊಮ್ಮೆ ಪಕ್ಕಕ್ಕಿಟ್ಟು ಕಣ್ಣಲ್ಲಿ ಒಸರುತ್ತಿರುವ ಕಣ್ಣೀರನ್ನು ಒರೆಸಿಕೊಂಡು ಪುನಃ ಓದುವಂತಾದರೆ ಅದೇ ನನಗೆ ಸಿಗುವ ಸಂತೃಪ್ತಿ”  ರವಿಬೆಳಗೆರೆಯವರು ಓದುಗರಿಂದ ಬಯಸುವ ಪ್ರತಿಕ್ರಿಯೆ ಇಷ್ಟೇ.  ಬರಹಗಾರ ಬರೆಯುವ ಯಾವುದೇ ಬರಹ ಓದುಗರ ಮೇಲೆ ಪ್ರಭಾವವನ್ನುಂಟು ಮಾಡಬೇಕು, ಓದುಗರ ಮನ ಕಲಕುವ, ಮನ ಸೆಳೆಯುವ, ಮನ ಸೂರೆಗೊಳ್ಳುವ ಶಕ್ತಿ ಕೇವಲ ರವಿಬೆಳಗೆರೆಯವರ ಬರಹಗಳಿಗೆ ಮಾತ್ರ ಇದೆ ಎಂದರೆ ಖಂಡಿತ ಅತಿಶಯೋಕ್ತಿ ಎನಿಸಲಾರದು.

ರವಿಬೆಳಗೆರೆಯವರ ಬಗ್ಗೆ, ಅವರ ಬರಹಗಳಲ್ಲಿರುವ ಮಾಂತ್ರಿಕ ಶಕ್ತಿಯ ಬಗ್ಗೆ, ಅವರ ಪುಸ್ತಕಗಳ ಬಗ್ಗೆ, ಲೇಖನಗಳ ಬಗ್ಗೆ, ಅವರ ಹಾಸ್ಯಪ್ರಜ್ಞೆಯ ಬಗ್ಗೆ, ಓದುಗರೆಡೆಗಿನ ಅವರ ಕಳಕಳಿಯ ಬಗ್ಗೆ, ಅವರ ನಿಲುವುಗಳ ಬಗ್ಗೆ ಹಾಗೂ ಕೊಂಚ ನನ್ನ ಬಗ್ಗೆ ಈ ವೆಬ್ ಬ್ಲಾಗಿನಲ್ಲಿ ಮಾಹಿತಿಗಹಳನ್ನು ಕಾಲ ಕಾಲಕ್ಕೆ ಪ್ರಕಟಿಸುವ ಸಣ್ಣ ಪ್ರಯತ್ನ ನನ್ನದು.

ರವಿಬೆಳಗೆರೆಯವರ ಸಾರಥ್ಯದಲ್ಲಿ ಮೂಡಿಬರುವ ವಾರಪತ್ರಿಕೆ ಹಾಯ್ ಬೆಂಗಳೂರ್‍ ಕೇವಲ ಕ್ರೈಂಗೆ ಸಂಬಂಧಿಸಿದ ಸುದ್ದಿಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಇನ್ನೂ ಕೆಲವರ ಅಭಿಪ್ರಾಯವಾಗಿದೆ. ಕ್ರೈಂ ಸುದ್ದಿಗಳನ್ನು ಹೊರತುಪಡಿಸಿ ಓದುಗರನ್ನು ಚಿಂತನೆಗೆ ಹಚ್ಚುವ, ಓದುಗರಲ್ಲಿ ಮನೋಲ್ಲಾಸ ಉಂಟು ಮಾಡುವ, ತಿಳುವಳಿಕೆ ಮೂಡಿಸುವ, ಕಚಗುಳಿ ಇಡುವ ಹಲವಾರು ರೀತಿಯ ಲೇಖನಗಳು ಪ್ರಕಟವಾಗಿವ ಪತ್ರಿಕೆ ಹಾಯ್ ಬೆಂಗಳೂರ್‍. ಇದಕ್ಕೆ ಪ್ರತಿಸ್ಪರ್ದೆ ಒಡ್ಡುವ ಅಥವಾ ಸರಿಸಾಟಿಯಾದ ಮತ್ತೊಂದು ವಾರಪತ್ರಿಕೆ ಇಲ್ಲ ಎಂಬುದು ಸರ್ವವಿಧಿತ. ಅದೇ ರೀತಿ ರವಿಬೆಳಗೆರೆಯವರು ಹೊರ ತಂದಿರುವ ಹಲವಾರು ಪುಸ್ತಕಗಳೂ ಸಹಾ ಪ್ರತಿಯೊಬ್ಬ ವ್ಯಕ್ತಿಯೂ ಓದಲೇ ಬೇಕಾದಂತಹುವುಗಳು. ಇಂಗ್ಲಿಷ್ ಸೇರಿದಂತೆ ಇನ್ನಿತರ ಭಾಷೆಗಳಲ್ಲಿನ ಆಯ್ದ ಉತ್ತಮ ಕೃತಿಗಳನ್ನು ತಮ್ಮ ಎಂದಿನ ಆಕರ್ಷಕ ಶೈಲಿಯಲ್ಲಿ ಕನ್ನಡಕ್ಕೆ ಅನುವಾದಿಸಿ ಅವನ್ನು ಓದುಗರಿಗೆ ಸಂಭ್ರಮದಿಂದ ನೀಡುವ ರವಿಬೆಳಗೆರೆಯವರ ಕಳಕಳಿ ಖಂಡಿತ ಪ್ರಶಂಸನೀಯ. ತಮ್ಮ ಅನಾರೋಗ್ಯದ ನಡುವೆಯೂ ದಿನದ ೧೮ ಗಂಟೆಗಳು ಕಾರ್ಯನಿರತರಾಗಿರುವ ಇವರ ಅವಿರತಶ್ರಮ, ಛಲ, ಆತ್ಮವಿಶ್ವಾಸ, ಏಕಾಗ್ರತೆ, ಅನುಕರಣೀಯ.

ತಮ್ಮ ಬರಹಗಳಿಗೆ ಸಂಪೂರ್ಣ ಹಕ್ಕುದಾರರಾಗಿರುವ ಬೆಳಗೆರೆಯವರ ಬರಹಗಳನ್ನು ಇಲ್ಲಿ ಪ್ರಕಟಿಸುವಲ್ಲಿ ಕಾನೂನಿನ ತೊಡಕಿನ ಬಗ್ಗೆ ಯೋಚಿಸಿದ್ದರೂ ಸಹಾ ಅವರ ಅಭಿಮಾನಿಯೆಂಬ ಸಲಿಗೆಯಿಂದ ಈ ಪ್ರಯತ್ನವನ್ನು ಕೈಗೆತ್ತಿಕೊಂಡಿದ್ದೇನೆ. ಹಾಗೆಂದು ರವಿಬೆಳಗೆರೆಯವರ ಎಲ್ಲಾ ಬರಹಗಳನ್ನು ಮತ್ತು ಪ್ರಕಟಿತವಾದ ಪುಸ್ತಕಗಳನ್ನು ಇಲ್ಲಿ Upload ಮಾಡಲಾಗುವುದಿಲ್ಲ. ಇವರ ಬರಹಗಳಲ್ಲಿ ಆಯ್ದ ಕೆಲವು ಲೇಖನಗಳನ್ನಷ್ಟೇ ಇಲ್ಲಿ ಬಿತ್ತರಿಸಲಾಗುವುದು. ಇವರು ಹೊರತಂದಿರುವ ಪುಸ್ತಕಗಳ ಮಾಹಿತಿ ಮಾತ್ರ ಇಲ್ಲಿ ಲಭ್ಯ. ರವಿಬೆಳಗೆರೆಯವರನ್ನೊಳಗೊಂಡಂತೆ ಓದುಗ ಬಳಗ ನನ್ನ ಈ ಪ್ರಯತ್ನಕ್ಕೆ ತಮ್ಮ ದನಿಗೂಡಿಸುವರೆಂಬ ಆಶಯದೊಂದಿಗೆ…..

-ಭಾಸ್ಕರ್‍

ಎಲ್ಲೋ ಹುಟ್ಟಿ ಮತ್ತಿನ್ನೆಲ್ಲೆಲ್ಲೋ ಹರಿದು ಕೊನೆಗೆಲ್ಲೋ ಹೋಗಿ ಸೇರುವ ನದಿಯಂತೆ ರವಿಬೆಳಗೆರೆ ಯವರ ಜೀವನ ಸಹಾ ಹಲವಾರು ಏಳು ಬೀಳುಗಳನ್ನು ಕಂಡಿದೆ. ಇವರ ಹಿನ್ನೆಲೆಯ ಬಗ್ಗೆ ರವಿ ಬೆಳಗೆರೆಯವರೇ ಈ ರೀತಿ ಹೇಳಿಕೊಂಡಿದ್ದಾರೆ.

“ಬರವಣಿಗೆಯೊಂದರಿಂದಲೇ ಅನ್ನ ಮತ್ತು ಆತ್ಮ ಸಂತೋಷ ದುಡಿದುಕೊಳ್ಳಲು ತೀರ್ಮಾನಿಸಿದಂತೆ ಬದುಕುತ್ತಿರುವವನು ನಾನು. ಬರವಣಿಗೆ ಬಿಟ್ಟು ಬೇರೇನನ್ನೂ ಮಾಡಲು ನನಗೆ ಬಾರದು ಅಂತ ತೀರ್ಮಾನಿಸಿ ಆಗಿದೆ.”

“ನನಗೀಗ ೫೧ ವರ್ಷ ವಯಸ್ಸು. ಹುಟ್ಟಿದ್ದು ೧೯೫೮ ರ ಮಾರ್ಚ್ ೧೫ ರಂದು, ಬಳ್ಳಾರಿಯಲ್ಲಿ. ಎರಡು ವರ್ಷ ತುಮಕೂರಿನ ಸಿದ್ದಗಂಗಾ ಹೈಸ್ಕೂಲಿನಲ್ಲಿ ಒದಿದ್ದನ್ನು ಬಿಟ್ಟರೆ ಬಿ.ಎ. ವರೆಗಿನ ವ್ಯಾಸಾಂಗ ನಡೆದಿದ್ದು ಬಳ್ಳಾರಿಯಲ್ಲಿ. ನಂತರರ ಓದಿದ್ದು ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಗಾಗಿ ಧಾರವಾಡದಲ್ಲಿ. ಕೆಳಕಾಲ ಬಳ್ಳಾರಿ, ಹಾಸನ ಮತ್ತು ಹುಬ್ಬಳಿಯ ಕಾಲೇಜುಗಳಲ್ಲಿ ಇತಿಹಾಸ ಉಪನ್ಯಾಸಕನಾಗಿ ಕೆಲಸ ಮಾಡಿದೆ. ಅದಕ್ಕೆ ಮುಂಚೆ ಮತ್ತು ಅದರ ನಂತರ ಸರಿಸುಮಾರು ೯ ವೃತ್ತಿ ಬದಲಿಸಿದೆ. ಹೈಸ್ಕೂಲ್ ಮೇಷ್ಟ್ರು, ಹೋಟೆಲ್ ಮಾಣಿ, ರೂಂ ಬಾಯ್, ರಿಸೆಪ್ಷನಿಸ್ಟ್, ಹಾಲು ಮಾರುವ ಗೌಳಿ, ದಿನಪತ್ರಿಕೆ ಹಂಚುವ ಹುಡುಗ, ಮೆಡಿಕಲ್ ರೆಪ್ರೆಸೆಂಟೇಟಿವ್, ಪ್ರಿಂಟಿಂಗ್ ಪ್ರೆಸ್ ಮಾಲೀಕ, ಥಿಯೇಟರಿನಲ್ಲಿ ಗೇಟ್ ಕೀಪರ್‍, ಕಾಲೇಜಿನಲ್ಲಿ ಉಪನ್ಯಾಸಕ, ಮನೆಪಾಠದ ಮೇಷ್ಟ್ರು ಹೀಗೆ ನಾನಾ ಕಡೆ ಮೈಕೈ ಮೆತ್ತಗಾಗಿಸಿಕೊಂಡು ದುಡಿದೆ. ಕರ್ನಾಟಕದ ಅಷ್ಟೂ ಪತ್ರಿಕೆಗಳಿಗೆ ಬರೆದೆ. ಅನೇಕ ಪತ್ರಿಕೆಗಳಿಗೆ ಕೆಲಸ ಮಾಡಿದೆ. ತುಂಬಾ ಚಿಕ್ಕವಯಸ್ಸಿಗೇ ನನಗಿಂತ ಜಾಸ್ತಿ ವಯಸ್ಸಾದ ಪತ್ರಿಕೆಗಳಿಗೆ ಸಂಪಾದಕನಾದೆ. ಈ ತನಕ ಸರಿ ಸುಮಾರು ೨೫ ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿದೆ. ಖುಷ್ವಂತ್ ಸಿಂಗ್, ಛಲಂ, ಪ್ರತಿಮಾ ಬೇಡಿ, ಬ್ರಿಗೇಡಿಯರ್‍ ಜಾನ್ ಪಿ ದಳವಿ, ಗೇಬ್ರಿಯಲ್  ಗಾರ್ಸಿಯಾ ಮಾರ್ಕ್ ವೇಜ್, ವಿನೋದ್ ಮಹ್ತಾ ಮುಂತಾದವರ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ. ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿಯವರು ಪ್ರಶಸ್ತಿ ಕೊಟ್ಟಿದ್ದಾರೆ. ಸಣ್ಣ ಕಥೆ ನನ್ನ ಅತೀ ಇಷ್ಠವಾದ ಪ್ರಕಾರ. ಅದರಲ್ಲೂ ಪ್ರಶಸ್ತಿ ಬಹುಮತಿಗಳು ಬಂದಿದೆ. ಸದ್ಯಕ್ಕೆ ನಾನು ’ಹಾಯ್ ಬೆಂಗಳೂರ್‍!’ ಕನ್ನಡ ವಾರಪತ್ರಿಕೆಯ ಹಾಗೂ ”ಓ ಮನಸೇ’ ಪಾಕ್ಷಿಕದ ಸಂಪಾದಕ. ಪ್ರಾರ್ಥನಾ ಎಜುಕೇಷನ್ ಸೊಸೈಟಿಯ ಸಂಸ್ಥಾಪಕ ಕಾರ್ಯದರ್ಶಿ. ಒಬ್ಬ ಹೆಂಡತಿ ಮೂವರು ಮಕ್ಕಳ ತಂದೆ. ನನ್ನ ಬಗೆಗಿನ ಉಳಿದ ವಿವರಗಳು ಅನ್ ಇಂಟರೆಸ್ಟಿಂಗ್.”

-ರವಿ ಬೆಳಗೆರೆ

Advertisements

54 Responses to ನಮ್ಮ ಬಗ್ಗೆ

 1. kumards ಹೇಳುತ್ತಾರೆ:

  ರವೀ ಸಾರ್, ನಿಮ್ದು ತು೦ಬಾ ಇ೦ಟರೆಸ್ಟಿ೦ಗ್ personality.. ನಿಮ್ಮ ಹಲವು ಪುಸ್ತಕಗಳನ್ನು ಓದಿದ್ದೇನೆ.. ಚಲ೦, ಹಿಮಾಲಯನ್ ಬ್ಲ೦ಡರ್, ದಿ ಕ೦ಪೆನಿ ಆಫ಼್ ವುಮೆನ್… ineteresting ಪುಸ್ತಕಗಳನ್ನು ಕನ್ನಡಕ್ಕೆ ತ೦ದಿದ್ದೀರಿ, ತರುತ್ತಿದ್ದೀರಿ… ನಿಮ್ಮ ಕಾರ್ಯಕ್ಕೆ ನಮ್ಮ ಕನ್ನಡಿಗ ಓದುಗರೆಲ್ಲರ ಪ್ರೋತ್ಸಾಹ ಸದಾ ಇದೆ..

  • ravibelagere ಹೇಳುತ್ತಾರೆ:

   ರವಿಬೆಳಗೆರೆಯವರ ಅಭಿಮಾನಿಯಾಗಿ ನಿಮ್ಮ ಸಲಹೆ ಮಾರ್ಗದರ್ಶನಕ್ಕೆ ತುಂಬು ಹೃದಯದ ಸ್ವಾಗತ. ಬ್ಲಾಗ್ ಬಂಧ ನಮ್ಮ-ನಿಮ್ಮ ನಡುವೆ ನಿರಂತರವಾಗಿರಲಿ. ಅಭಿಮಾನ ಚಿರಾಯುವಾಗಲಿ……

   • ram ganesh ಹೇಳುತ್ತಾರೆ:

    sir im a very big fan of u but the problem is i dont know how to access u…….. sir ur articles are pretty much contemporary and it reminds hunter s thompson’s articles….. i have written some articles but i don have ur mail id or your ph no please provide any 1 of them……. my whole family is a big fan of u sir.. im an engineering student from hassan and i seriously love ur articles… please oblige my request please sir……. i think people like u can influence some changes in our society… my mail id is ramganesh_ks@yahoo.co.in…im nervous so forgetting the protocol to b followed in writing a reply so please oblige

 2. Dr. Azad Ismail Saheb ಹೇಳುತ್ತಾರೆ:

  ಆತ್ಮೀಯ ರವಿ ಸರ್,
  ನನ್ನ ನೆನಪು ಬಂದರೆ ಉತ್ತರಿಸಿ.
  ನೀವು ಕಸ್ತೂರಿಯಲ್ಲಿದಾಗಿನ ಸಮಯ. ನಾನು ಮಣಿಪುರದಲ್ಲಿ Fisheries Science ನಲ್ಲಿ Scientist ಆಗಿ Indian Council of Agricultural Research ನಲ್ಲಿ ಕೆಲಸಮಾಡಿತ್ತಿದ್ದಾಗ ೪-೫ ಕನ್ನಡ Scientific ಲೇಖನಗಳನ್ನು ಕಳುಹಿಸಿದ್ದೆ, ನೀವು ಪ್ರಕಟಿಸಿದ್ದಿರಿ, ಒಂದೆರಡು ಪತ್ರ ಸಹಾ ಬರೆದಿದ್ದೆ. ನೀವು ಹಾಯ್ ಬೆಂಗಳೂರಿಗೆ ಬಂದಮೇಲೆ (ನಾನು ಮದ್ರಾಸಿಗೆ ವರ್ಗವಾಗಿ ಬಂದಮೇಲೆ) ೨-೩ ಪತ್ರ ಬರೆದೆ ಆದರೆ ನಿಮ್ಮ ಉತ್ತರ ಸಿಗಲಿಲ್ಲ…ಸಾವಿರಾರು ಅಭಿಮಾನಿಗಳಿರುವ ನಿಮಗೆ ಬರದ ನನ್ನ ಪತ್ರ ಕ.ಬು. ಗೆ ಸೇರಿತು ಎಂದುಕೊಂಡು ಸುಮ್ಮನಾದೆ.
  ನಿಮ್ಮ (ಭಾವನ ಮೇಡಂ ರವರ) ರಾಧ ಧಾರಾವಾಹಿಯನ್ನು ತಪ್ಪದೇ ನೋಡುತ್ತೇನೆ, ಅಂದಹಾಗೆ ನಾನು ಈಗ Kuwait Institute for Scientific Research ನಲ್ಲಿ Aquatic Animal Health Scientist ಆಗಿ ಕೆಲಸಮಾಡುತ್ತಿದ್ದೇನೆ. ನನ್ನ ಅನಿಸಿಕೆ ಹೇಳಿದರೆ ತಪ್ಪಿಲ್ಲ ಎಂದುಕೊಳ್ಳುತ್ತೇನೆ.
  ಇದರಲ್ಲಿನ ಪಾತ್ರ ಭಾರತಿದೇವಿ….ಹೆಸರು…ಬೇರೆ ಇದ್ದಿದ್ದರೆ ಚನ್ನಾಗಿತ್ತು, negative ಪಾತ್ರಕ್ಕೆ ಭಾರತೀದೇವಿ…??!! ಇನ್ನು ಉದ್ದಕ್ಕೂ ಅವಳಿಗೇ ಜಯ ಸಿಗುವುದೂ ಸ್ವಲ್ಪ ಅತಿ ಎನಿಸುತ್ತದೆ..
  ಸಂಬಂಧಗಳ ಕಲಸುಮೇಲೋಗರ ಆಗುತ್ತಿದೆಯೇ..(ಹಾಗೆ ನನ್ನ ಅನ್ನಿಸಿಕೆ ಇರಬಹುದು)??
  ಸಮಯ ಸಿಕ್ಕರೆ ನನ್ನ ಬ್ಲಾಗ್ ಜಲನಯನ ನೋಡಿ ನಿಮ್ಮ ಅಮೂಲ್ಯ ಅನಿಸಿಕೆಯನ್ನು ತಿಳಿಸಿ.
  http://jalanayana.blogspot.com/
  ನಮಸ್ಕಾರಗಳೊಂದಿಗೆ.
  ಆಜಾದ್

  • ravibelagere ಹೇಳುತ್ತಾರೆ:

   ಪ್ರಿಯ ಆಜಾದ್ ರವರೇ,

   ನೀವು ಈ ಬ್ಲಾಗನ್ನು ಸಂಪೂರ್ಣ ಓದಲಿಲ್ಲವೆಂದುಕೊಳ್ಳುತ್ತೇನೆ.. ಓದುಗರ ನೆನಪಲ್ಲಿ ಮಾಸದೇ ಎಂದಿಗೂ ಉಳಿಯುವ ಬರಹಗಾರ ರವಿಬೆಳೆಗೆರೆಯವರು. ಇವರ ಅಭಿಮಾನಿಯಾಗಿ ನಾನು ಈ ಬ್ಲಾಗನ್ನು ಪ್ರಾರಂಭಿಸಿದ್ದೇನೆ. ಈ ಬ್ಲಾಗ್ ನೊಡನೆ ನಿಮ್ಮ ಒಡನಾಟ ನಿರಂತರವಾಗಿರಲಿ ಒಂದಲ್ಲಾ ಒಮ್ಮೆ ನಿಮ್ಮ ಈ ಪ್ರತಿಕ್ರಿಯೆಯನ್ನು ರವಿಬೆಳಗೆರೆಯವರು ನೋಡುತ್ತಾರೆ. ಆ ಸಮಯ ಬಹುದೂರವೇನಿಲ್ಲ ಎಂದು ನನ್ನ ಅಭಿಪ್ರಾಯ. ಅಭಿಮಾನ ನಿತ್ಯ ಹರಿದುಬರಲಿ…

 3. neeli ಹೇಳುತ್ತಾರೆ:

  namaskara,

  I dint know that you blog here. I used to read ‘Hi Bengaluru’ for many years when i was in bengaluru. Haven’t been able to read it since i moved to US ( i read couple of your articles on internet). I really wish there is a internet version of the paper. probably there might be many people who would be interested to read it online. Do you have any plans of making a e-paper? Let me know if you are interested, i can help you with the website etc.

 4. ವಿಕಾಸ್ ಹೆಗಡೆ ಹೇಳುತ್ತಾರೆ:

  ನಮ್ಮ ಪ್ರೀತಿಯ ಅಕ್ಷರ ಬ್ರಹ್ಮನಿಗೆ ಒಂದು ವೆಬ್ ಸೈಟ್ ಮಾಡಿ ಅಂತ ಬೇಡಿಕೆ ಇಟ್ಟು ಬಹಳ ದಿನಗಳೇ ಆಗಿ ಹೋಯಿತು. ಅಂತೂ ಅಭಿಮಾನಿಯಿಂದ ಈ ಬ್ಲಾಗ್ ಆದರೂ ಶುರುವಾದದ್ದು ಸಂತೋಷದ ವಿಷಯ. thank you… ಯಾವುದಕ್ಕೂ ಬರಹಗಳಿಗೆ ಮೌಖಿಕವಾಗಿಯಾದರೂ ರೈಟ್ಸ್ ತಗೊಂಡ್ರೆ ಚೆನ್ನಾಗಿರತ್ತೆ. ಉತ್ತರ ಬರೆಯುವಾಗ ’ರವಿ ಬೆಳಗೆರೆ’ ಎಂಬ ಹೆಸರನ್ನು ಬಳಸುವ ಬದಲು ಬೇರೆ ಹೆಸರು ಒಳ್ಳೆಯದು ಅನ್ನಿಸುತ್ತದೆ.

  • ravibelagere ಹೇಳುತ್ತಾರೆ:

   ವಿಕಾಸ್ ರವರೇ,
   ವಿಕಾಸ್ ರವರೇ,

   ನಿಮ್ಮ ಪ್ರತಿಕ್ರಿಯೆ ಖಂಡಿತ ಗಮನಾರ್ಹವಾಗಿದೆ. ಇಂಟರ‍್ ನೆಟ್ ಮೀಡಿಯಾನಲ್ಲಿ ರವಿಬೆಳಗೆರೆವರ ಒಂದು ವೆಬ್ ಸೈಟ್ ಅತ್ಯವಶ್ಯಕವಾಗಿದೆ ಎಂಬುದನ್ನು ಮನಗಂಡು ಈ ಪ್ರಯತ್ನವನ್ನು ನಾನು ಕೈಗೆತ್ತಿಕೊಂಡೆ. ರವಿಯವರ ಮೇಲಿನ ಅಭಿಮಾನವೇ ಇದಕ್ಕೆ ಸ್ಪೂರ್ತಿ. ಬೆಳಗೆರೆಯವರ ಬರಹದಲ್ಲಿನ ಶಕ್ತಿ ಇವರ ಜನಪ್ರಿಯತೆಯನ್ನು ಸಹಿಸದ ಕೆಲವರು ಇವರ ಬಗ್ಗೆ ಇಲ್ಲ ಸಲ್ಲದ ಠೀಕೆಗಳನ್ನು ಇಂಟರ‍್ ನೆಟ್ ಮೀಡಿಯಾವಿನಲ್ಲಿ ವ್ಯವಸ್ಥಿತವಾಗಿ ಮಾಡುತ್ತಾ ಬರುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ರವಿಯವರ ಬಗ್ಗೆ ಹಾಗೂ ಇವರ ಲೇಖನಗಳು, ಪುಸ್ತಕಗಳು, ಇವರ ಸಾರಥ್ಯದಲ್ಲಿ ಮೂಡಿ ಬರುವ ಹಾಯ್ ಬೆಂಗಳೂರ‍್ ವಾರಪತ್ರಿಕೆ ಇವುಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯವೇ ಈ ಬ್ಲಾಗಿನ ಹಾಗೂ ನನ್ನ ಉದ್ದೇಶ. ಉತ್ತರ ಬರೆಯುವಲ್ಲಿ ಬೇರೆ ಹೆಸರು ಬಳಸುವ ವಿಧಾನವೇನಾದರೂ ಇದ್ದಲ್ಲಿ ದಯವಿಟ್ಟು ತಿಳಿಸಿ. ನನ್ನ ಈ ಪ್ರಯತ್ನದ ಬಗ್ಗೆ ನಿಮ್ಮ ಸಲಹೆ, ಮಾರ್ಗದರ್ಶನ, ಸದಾ ಬರಲಿ.

   ಅಭಿಮಾನಿ.

   • vikas ಹೇಳುತ್ತಾರೆ:

    wordpressನಲ್ಲಿ ‘ರವಿ ಬೆಳಗೆರೆ’ ಎಂದು ಬರೆಯುವ ಬದಲು ಬೇರೆ ಹೆಸರು ಬರೆಯಿರಿ. ಕಾಮೆಂಟ್ ಬರೆಯುವಾಗ, ಉತ್ತರಿಸುವಾಗ ರವಿಬೆಳಗೆರೆ ಅಂತ ಹೆಸರು ಬರೆಯದೇ , ಬೇರೆ ಹೆಸರು ಬರೆಯಿರಿ . ಬ್ಲಾಗ್ ಶೀರ್ಷಿಕೆಯಲ್ಲಿ ಅದೇ ಹೆಸರು ಇರಲಿ.

 5. LAXMAN ಹೇಳುತ್ತಾರೆ:

  raveee you are really a great great writer, i read your Hi Bangalore from P U C 1st year, and you are a genious, e akshar bandha heege sagale..

  laxman mangasule,,

 6. Basava,Bidar ಹೇಳುತ್ತಾರೆ:

  Dear Ravi Sir,
  I read Hi Bangalore regularly, in last edition we expected in detail actual reason behind Madangopals exit from health ministry.Becouse you know him & Shriramulu better than CM.We are not getting reports from Bidar.Please write about Nagamarpallys,Khandreys politics & how they looted & why Aurad,Bhalki & Bidar are so backward.At least on good work by DC Harsha Gupta.

 7. ram ganesh ಹೇಳುತ್ತಾರೆ:

  please respond me sir

 8. netra ಹೇಳುತ್ತಾರೆ:

  HAI SIR I AM UR FAN SIR I LOVE UR WRITING

 9. sangmesh ಹೇಳುತ್ತಾರೆ:

  dear ravi sir,
  i would to say one thing of you,
  you have a great personality,we are very proud of u sir, we have great person such u.
  i read (Hi Benglore,O Manase, and sunday articale)
  and i have readin chalam,botam item2,himalayan blunder. now i want to read “FIRST OF ” BOOK.
  if any rong in this comment i request u sir,please forgive me.
  all the Best sir.

 10. ಅರಕಲಗೂಡು ಜಯಕುಮಾರ್ ಹೇಳುತ್ತಾರೆ:

  Thanks for giving opportunity to read Hi Bangalore, and Omanase in internet blog. I hope to read internet version or website of Hi Bangalore. I am awaiting for that, I am a big fan of Ravi Belagere and his writeup, style of writing..

 11. sangamesh ಹೇಳುತ್ತಾರೆ:

  hi friend,
  am sangamesh.p.s from navalgund,this is my first letter 2 u, i am not perfect in english, hence i wil typ this letter in kannada language
  naanu o manase na tappade oduttene nanu karnatakadalliro
  nimma abhimanigalalli obba , e letter neevu odatira anta tilkondidini ………. odida mele nanna number ge 1 msg
  kalisi saku nanu kunidadi bidtini
  i l o v e o m a n a s e & nimma sambhashaneyannu kooda
  ur’s spark

 12. mahadev balekundri ಹೇಳುತ್ತಾರೆ:

  hello sir,,

  nanu nimm 60 nimishagal dhwani mudrike “manase” keliddene adannu keli nanage tumba santosh vagide ,adannu kelata iddare innu kelatane iara beku anisutte,,,,,,,,,,

 13. santhosh ಹೇಳುತ್ತಾರೆ:

  dear sir

  sira niv bardiro ondondu padanu est arthpurna agirthathree, ellinda sikthavree nimge Aaa pada Aaa sentence realy u r great ree. hands up to u ree sira

  nimma Santhosha

 14. manjula rathod ಹೇಳುತ್ತಾರೆ:

  sir,
  nimma yaavudee tarahada barahagalu pratiyobbara hrudayavannu tattade eralaradu

 15. Sri ಹೇಳುತ್ತಾರೆ:

  ನನ್ನ ಪ್ರೀತಿಯ Friend ನಾನು ನಿಮ್ಮೋಂದಿಗೆ ನನ್ನ ನೋವು ನಲಿವನ್ನು ಹೇಳಬೇಕು ಅದಕ್ಕೆ ನಾನು ನಿಮ್ಮೋಂದಿಗೆ ಹೇಗೆ ಹೇಳಬೇಕು ಎನ್ನುವ ರೀತಿ ಗೊತ್ತಾಗುತ್ತಿಲ್ಲ ನಾನು ನಿಮ್ಮ ಜೊತೆ ಪರಸ್ವರ ಮಾತನಾಡಿ ವಿಷಯವನ್ನು ತಿಳಿಸಿ ನನ್ನ ನೋವನ್ನ ಹೇಳಬೇಕು ಅಂತ ನಾನು ತುಂಬಾ ಸಲಹ ಫೋನ್‌ ಮಾಡಿದೆ ಆದರೆ ಆಗಲಿಲ್ಲ ನಾನು ನಿಮ್ಮ ಪುಟ್ಟ Friend ಅಂದುಕೊಳ್ಳಿ Please ನನಗೆ ಉತ್ತರ ನೀಡಿ. I will waiting for your reply please pa . my name Sri

 16. LAKSHMI.M ಹೇಳುತ್ತಾರೆ:

  DEAR SIR,I AM A BIG FAN OF YOU,BECAUSE YOU WRITE ABOUT REAL LIFE INCIDENTS.I SAW YOU ONETIME I TOOK YOUR AUTOGRAPH ALSO IT IS MY PRECIOUS THINGS IN WORLD NOT MY CHILDRENS ALSO.REALLY I THANK YOU SO MUCH BECAUSE I LEARNT MORE THINGS ABOUT WORLD AND ITs PEOPLE.ONE TIME IWAS SO NERVOUS TO DO ANYTHING BUT,WHEN I STARTED READING YOUR BOOKS I GOT LOTS OF EXEPERIENCE AND YOU TAUGHT ME HOW TO LEAD MY LIFE AMONG THE PEOPLE.

 17. Yogee ಹೇಳುತ್ತಾರೆ:

  Dear uncle,
  I am from Dharwad i had started reading your books three years ago.really i learnt more of your books. I noticed great inspire in your books that brings a lot of changes in my life. once in a time i was very disgusting and nervous.But now very happiest person in the world beacuase of you and yuors touchable articles. Lot of thanks uncle
  (if i committed the any mistakes in writings please forgive me)

 18. anuradha ಹೇಳುತ್ತಾರೆ:

  dear sir i am your fan i like ur writeing sytle. i read your books.

 19. ಅರೆಯೂರು ಚಿ.ಸುರೇಶ್ ಪತ್ರಕರ್ತರು, ಅ.ವೈದ್ಯನಾಥಪುರ-೫೭೨೧೧೮ ಅರೆಯೂರು ಅಂಚೆ ತುಮಕೂರು ತಾ.,ಜಿಲ್ಲೆ. ಹೇಳುತ್ತಾರೆ:

  ಲಹರಿ
  ಬೆಚ್ಚಗಿನ ನೆನಪೇ,
  ಏಕೋ ನಿನ್ನ ಹೆಸರನ್ನು ಬರೆಯಲು ಕೈ ಸೋಲುತ್ತವೆ.ಅಷ್ಟಕ್ಕೂ ನಿನ್ನ ಹೆಸರೇನೆಂದು ನನಗಾದರೂ ಎಲ್ಲಿ ಗೊತ್ತು? ಪ್ರೀತಿಗೆ,ಹೆಸರು ಜಾತಿ ಅಂತಸ್ತು ಯಾವುದು ಬೇಕು? ಸುರಿವ ಮಳೆಗೆ ಸುಡುವ ಬಿಸಿಲಿಗೆ ಹರಿವ ನದಿಗೆ ಜಾತಿ ಉಂಟಾ? ಹೆಸರುಂಟ? ಇಬ್ಬನಿಗ್ಯಾವ ಜಾತಿ? ಯಾವ ಕುಲ?
  ಮುಂಜಾನೆ ಇಬ್ಬನಿಯಿಂದ ನೆಂದು ಮುದ್ದೆಯಾದ ಹೂವು ಆ ಸೂರ್ಯನ ಎಳೆಬಿಸಿಲಿಗೆ ಅದೆಂತಹ ಬಣ್ಣ ಥಳ ಥಳ ಪಳ ಪಳ ಈ ಪ್ರೀತಿನೂ ಅಂತದ್ದೇ ಕಣೇ ಹುಡುಗಿ. ನೀನೊಂದು ಗುಲಾಬಿ ಹೂವು, ನಾನು ಇಬ್ಬನಿ ಸೂರ್ಯನ ಎಳೆ ಬಿಸಿಲೇ ನಮ್ಮಿಬ್ಬರ ಪ್ರೀತಿ!
  ಹುಚ್ಚ ಅಂತಿಯಾ?
  ಹೌದು ಕಣೇ ನಿನ್ನ ನೋಡಿದ ದಿನದಿಂದಲೂ ನಾನು ಹುಚ್ಚನೆ.ನಿನ್ನ ಪ್ರೀತಿಯ ಹುಚ್ಚ.
  ನೀನು ಬಂದ ಮೇಲೆ ತಾನೇ
  ಇಷ್ಟು ಚಂದ ಈ ಬಾಳು
  ನೀನೆ ತಾನೇ ಹೇಳಿ ಕೊಟ್ಟೆ ಪ್ರಿತಿಸಲೂ…
  ಆದರೂ ನಾನು ನಿನ್ನ ಮುಂದೆ ಎಂದಿಗೂ ಹುಚ್ಚುಚ್ಚಾಗಿ ಆಡಿಲ್ಲ. ನೀನು ಎದುರಲ್ಲಿ ಬಂದಾಗ ಸೈಲೆಂಟಾಗಿ ಸೈಡ್ ಬಿಟ್ಟಿದ್ದೇನೆ. ನೀನು ನನ್ನ ಸನಿಹದಲ್ಲಿ ಹೊಗುತಿದ್ದರೆನನ್ನ ಎದೆಯಲ್ಲಿ ಮಿಂಚಿನಂತ ವಿದ್ಯುತ್ ಸಂಚಾರ…
  ಏನೋ ಒಂಥರಾ…ಈ ಪ್ರೀತಿಯು…
  ಈ ರೀತಿಯು ಮನಸ್ಸೆಲ್ಲಾ…..
  ಹೌದು ಕಣೇ , ನನ್ನ ಕನಸು ಮನಸ್ಸೆಲ್ಲಾ ನೀನೆ . ಮುಂಜಾನೆಯ ಮೈ ನಡುಗಿಸುವ ಚಳಿಯಲ್ಲೂ ನಿನ್ನದೇ ಸಿಹಿ ಕನಸು

 20. ಅರೆಯೂರು ಚಿ.ಸುರೇಶ್ ಪತ್ರಕರ್ತರು ಹೇಳುತ್ತಾರೆ:

  ಕವಿತೆ ಹುಟ್ಟಿತೆ ಸ್ಪರ್ಧೆಗಾಗಿ ಕವಿತೆ ಹುಟ್ಟಿತೆ ? ನಿಸರ್ಗದ ಅಂತರಾಳದಲ್ಲಿ ಅನುಭವದ ಬುತ್ತಿಯಲ್ಲಿ ಅರಳಲಾರದ ಕವಿತೆ ಗೀಜಿಗುಡುವ ಈ ಕಾಂಕ್ರಿಟ್ ಕಾಡಿನಲ್ಲಿ ದುಗುಡದ ತಳಮಳದಲ್ಲಿ ಹುಟ್ಟಿತೆ ಕವಿತೆ ? ಬೆಟ್ಟದ ಕಲ್ಲುಬಂಡೆ ಶಿಲೆಯಾಗಲು ಅದೆಷ್ಟು ಉಳಿಗಳ ಹೊಡೆತ ? ಶಿಲ್ಪಿಯ ಭಯಂಕರ ಸಹನೆ ? ಮಂದಹಾಸದಲ್ಲಿ ನಗದ ಶಿಲೆ ತಳಮಳದಲ್ಲಿ ಅರಳುವುದೇ ಕಲೆ ? ಹೀಗೆ …. ಧೀಡಿರನೆ ಕವಿತೆ ಹುಟ್ಟುವಂತಿದ್ದರೆ … ಇಷ್ಟೋತ್ತಿಗೆ ನಾನು ಪ್ರಕಟಿಸಿ ಬಿಟ್ಟಿರುತ್ತಿದ್ದೆ ಕವನ ಸಂಕಲನಗಳ ಸ್ಪರ್ಧೆಗಾಗಿ ಕವಿತೆ ಹುಟ್ಟಿತೆ ? ಗರ್ಭಕಟ್ಟಿ ನವಮಾಸಗಳ ಕಾಲ ತಾಯ ಗರ್ಭದಲ್ಲಿ ಬೆಳೆದ ಮಗುವಿನ ಜನನವೆ ಎಷ್ಟೊಂದು ಕಷ್ಟಕರ ಅಂತಹುದರಲ್ಲಿ … ಸ್ಪರ್ಧೆಗಾಗಿ ಗರ್ಭವನ್ನೇ ಕಟ್ಟದೆ ಧಿಡೀರನೆ ಕವಿತೆ ಹುಟ್ಟುವುದಾದರೂ ಹೇಗೆ ? ಹೇಳಿ… ಕವಿತೆ ಹುಟ್ಟಿತೆ ?

 21. areyuru suresh ಹೇಳುತ್ತಾರೆ:

  ಬೆಚ್ಚಗಿನ ನೆನಪೇ,
  ಏಕೋ ನಿನ್ನ ಹೆಸರನ್ನು ಬರೆಯಲು ಕೈ ಸೋಲುತ್ತವೆ.ಅಷ್ಟಕ್ಕೂ ನಿನ್ನ ಹೆಸರೇನೆಂದು ನನಗಾದರೂ ಎಲ್ಲಿ ಗೊತ್ತು? ಪ್ರೀತಿಗೆ,ಹೆಸರು ಜಾತಿ ಅಂತಸ್ತು ಯಾವುದು ಬೇಕು? ಸುರಿವ ಮಳೆಗೆ ಸುಡುವ ಬಿಸಿಲಿಗೆ ಹರಿವ ನದಿಗೆ ಜಾತಿ ಉಂಟಾ? ಹೆಸರುಂಟ? ಇಬ್ಬನಿಗ್ಯಾವ ಜಾತಿ? ಯಾವ ಕುಲ?
  ಮುಂಜಾನೆ ಇಬ್ಬನಿಯಿಂದ ನೆಂದು ಮುದ್ದೆಯಾದ ಹೂವು ಆ ಸೂರ್ಯನ ಎಳೆಬಿಸಿಲಿಗೆ ಅದೆಂತಹ ಬಣ್ಣ ಥಳ ಥಳ ಪಳ ಪಳ ಈ ಪ್ರೀತಿನೂ ಅಂತದ್ದೇ ಕಣೇ ಹುಡುಗಿ. ನೀನೊಂದು ಗುಲಾಬಿ ಹೂವು, ನಾನು ಇಬ್ಬನಿ ಸೂರ್ಯನ ಎಳೆ ಬಿಸಿಲೇ ನಮ್ಮಿಬ್ಬರ ಪ್ರೀತಿ!
  ಹುಚ್ಚ ಅಂತಿಯಾ?
  ಹೌದು ಕಣೇ ನಿನ್ನ ನೋಡಿದ ದಿನದಿಂದಲೂ ನಾನು ಹುಚ್ಚನೆ.ನಿನ್ನ ಪ್ರೀತಿಯ ಹುಚ್ಚ.
  ನೀನು ಬಂದ ಮೇಲೆ ತಾನೇ
  ಇಷ್ಟು ಚಂದ ಈ ಬಾಳು
  ನೀನೆ ತಾನೇ ಹೇಳಿ ಕೊಟ್ಟೆ ಪ್ರಿತಿಸಲೂ…
  ಆದರೂ ನಾನು ನಿನ್ನ ಮುಂದೆ ಎಂದಿಗೂ ಹುಚ್ಚುಚ್ಚಾಗಿ ಆಡಿಲ್ಲ. ನೀನು ಎದುರಲ್ಲಿ ಬಂದಾಗ ಸೈಲೆಂಟಾಗಿ ಸೈಡ್ ಬಿಟ್ಟಿದ್ದೇನೆ. ನೀನು ನನ್ನ ಸನಿಹದಲ್ಲಿ ಹೊಗುತಿದ್ದರೆನನ್ನ ಎದೆಯಲ್ಲಿ ಮಿಂಚಿನಂತ ವಿದ್ಯುತ್ ಸಂಚಾರ…
  ಏನೋ ಒಂಥರಾ…ಈ ಪ್ರೀತಿಯು…
  ಈ ರೀತಿಯು ಮನಸ್ಸೆಲ್ಲಾ…..
  ಹೌದು ಕಣೇ , ನನ್ನ ಕನಸು ಮನಸ್ಸೆಲ್ಲಾ ನೀನೆ . ಮುಂಜಾನೆಯ ಮೈ ನಡುಗಿಸುವ ಚಳಿಯಲ್ಲೂ ನಿನ್ನದೇ ಸಿಹಿ ಕನಸು

 22. ಅರೆಯೂರು ಚಿ.ಸುರೇಶ್ ಪತ್ರಕರ್ತರು, ಅ.ವೈದ್ಯನಾಥಪುರ-೫೭೨೧೧೮ ಅರೆಯೂರು ಅಂಚೆ ತುಮಕೂರು ತಾ.,ಜಿಲ್ಲೆ. ಹೇಳುತ್ತಾರೆ:

  ಬೆಚ್ಚಗಿನ ನೆನಪೇ,
  ಏಕೋ ನಿನ್ನ ಹೆಸರನ್ನು ಬರೆಯಲು ಕೈ ಸೋಲುತ್ತವೆ.ಅಷ್ಟಕ್ಕೂ ನಿನ್ನ ಹೆಸರೇನೆಂದು ನನಗಾದರೂ ಎಲ್ಲಿ ಗೊತ್ತು? ಪ್ರೀತಿಗೆ,ಹೆಸರು ಜಾತಿ ಅಂತಸ್ತು ಯಾವುದು ಬೇಕು? ಸುರಿವ ಮಳೆಗೆ ಸುಡುವ ಬಿಸಿಲಿಗೆ ಹರಿವ ನದಿಗೆ ಜಾತಿ ಉಂಟಾ? ಹೆಸರುಂಟ? ಇಬ್ಬನಿಗ್ಯಾವ ಜಾತಿ? ಯಾವ ಕುಲ?
  ಮುಂಜಾನೆ ಇಬ್ಬನಿಯಿಂದ ನೆಂದು ಮುದ್ದೆಯಾದ ಹೂವು ಆ ಸೂರ್ಯನ ಎಳೆಬಿಸಿಲಿಗೆ ಅದೆಂತಹ ಬಣ್ಣ ಥಳ ಥಳ ಪಳ ಪಳ ಈ ಪ್ರೀತಿನೂ ಅಂತದ್ದೇ ಕಣೇ ಹುಡುಗಿ. ನೀನೊಂದು ಗುಲಾಬಿ ಹೂವು, ನಾನು ಇಬ್ಬನಿ ಸೂರ್ಯನ ಎಳೆ ಬಿಸಿಲೇ ನಮ್ಮಿಬ್ಬರ ಪ್ರೀತಿ
  ಹುಚ್ಚ ಅಂತಿಯಾ?
  ಹೌದು ಕಣೇ ನಿನ್ನ ನೋಡಿದ ದಿನದಿಂದಲೂ ನಾನು ಹುಚ್ಚನೆ.ನಿನ್ನ ಪ್ರೀತಿಯ ಹುಚ್ಚ.
  ನೀನು ಬಂದ ಮೇಲೆ ತಾನೇ
  ಇಷ್ಟು ಚಂದ ಈ ಬಾಳು
  ನೀನೆ ತಾನೇ ಹೇಳಿ ಕೊಟ್ಟೆ ಪ್ರಿತಿಸಲೂ…
  ಆದರೂ ನಾನು ನಿನ್ನ ಮುಂದೆ ಎಂದಿಗೂ ಹುಚ್ಚುಚ್ಚಾಗಿ ಆಡಿಲ್ಲ. ನೀನು ಎದುರಲ್ಲಿ ಬಂದಾಗ ಸೈಲೆಂಟಾಗಿ ಸೈಡ್ ಬಿಟ್ಟಿದ್ದೇನೆ. ನೀನು ನನ್ನ ಸನಿಹದಲ್ಲಿ ಹೊಗುತಿದ್ದರೆನನ್ನ ಎದೆಯಲ್ಲಿ ಮಿಂಚಿನಂತ ವಿದ್ಯುತ್ ಸಂಚಾರ…
  ಏನೋ ಒಂಥರಾ…ಈ ಪ್ರೀತಿಯು…
  ಈ ರೀತಿಯು ಮನಸ್ಸೆಲ್ಲಾ…..
  ಹೌದು ಕಣೇ , ನನ್ನ ಕನಸು ಮನಸ್ಸೆಲ್ಲಾ ನೀನೆ . ಮುಂಜಾನೆಯ ಮೈ ನಡುಗಿಸುವ ಚಳಿಯಲ್ಲೂ ನಿನ್ನದೇ ಸಿಹಿ ಕನಸು

 23. ಅರೆಯೂರು ಚಿ.ಸುರೇಶ್ ಪತ್ರಕರ್ತರು, ಅ.ವೈದ್ಯನಾಥಪುರ-೫೭೨೧೧೮ ಅರೆಯೂರು ಅಂಚೆ ತುಮಕೂರು ತಾ.,ಜಿಲ್ಲೆ. ಹೇಳುತ್ತಾರೆ:

  AREYURU CHI.SURESH EDITOR BADAVARAKOOGU WEEKLY A.VAIDYANATHAPURA -572118 AREYURU POST TUMKUR

 24. ravibelagere ಹೇಳುತ್ತಾರೆ:

  hello AREYURU CHI.SURESH nimma badavarakoogu super!

 25. ಅರೆಯೂರು ಚಿ.ಸುರೇಶ್ ಹೇಳುತ್ತಾರೆ:

  ಅರೆಯೂರು ಚಿ.ಸುರೇಶ್

  ಪತ್ರಕರ್ತರು,

  ಅ.ವೈದ್ಯನಾಥಪುರ-೫೭೨೧೧೮

  ಅರೆಯೂರು ಅಂಚೆ

  ತುಮಕೂರು ತಾ.,ಜಿಲ್ಲೆ.

 26. AREYURU CHI.SURESH ಹೇಳುತ್ತಾರೆ:

  RAVI sir,
  nimma sandeep hatye book super!
  pataki kasabge gallu bega jariyagali embude nanna ashe!

 27. ಅರೆಯೂರು ಚಿ.ಸುರೇಶ್ ಹೇಳುತ್ತಾರೆ:

  ಪ್ರೀತಿಯ ಭಾಸ್ಕರ್,

  ನೀನು ರವೀಸಾರ್ ಬಗ್ಗೆ ಇಟ್ಟಿರುವ ಅಭಿಮಾನಕ್ಕೆ ನನ್ನ ವಂದನೆಗಳು.

  ರವಿ ಬೆಳಗೆರೆ ಒಂದು ಸರೋವರ ನಾವುಗಳೆಲ್ಲ ನದಿಗಳು ಅಲ್ಲವೇ ಗೆಳಯ?

  ರವೀಸಾರ್ ಬದುಕು-ಬರಹಗಳು ನನ್ನದೇ ಬದುಕಿನ ಪುಟ್ಟಪುಟ್ಟ ಘಟನೆಗಳಿದ್ದಂತೆ. ಅದಕ್ಕೆ ಏನೋ ಬೆಳಗೆರೆ ಎಂದರೆಅಷ್ಟು ಆಪ್ತ ಎನ್ನಿಸುವುದು?

 28. veenus ಹೇಳುತ್ತಾರೆ:

  hello sir
  i am a big fan of urs.
  regularly i read ur articles and every time i got a new message.
  whether its abt politics, personel, or anything else.
  there is a need of u kind of people to open so many sides of this world infront of us.
  this world is so beautiful and life is such a gift which god has given us.
  i will try to take best use of it.
  and if destiny permits , i’ll achieve something in life and then i’ll come to meet you and i can proudly say that ” dada see, this is what the inspiration, what your kids got from you”.

 29. bksuresha ಹೇಳುತ್ತಾರೆ:

  halo ravi avare
  nimma ella baraha ,maatu,tv karyakramagaloo thumbaa chenna.
  nooraru varusha nimma eae jeeva heege saagali.
  bareyuttaley iri,nimma maathe chenna.

 30. bksuresha ಹೇಳುತ್ತಾರೆ:

  nimmella maathu,baraha,thumbaane ista.
  heege saagali nimma baduku,idu namagoo ista.
  bksuresha,hosur

 31. pradeep najanangudu ಹೇಳುತ್ತಾರೆ:

  GURUGALE,
  nanu engineerig student 22year old.. solpa chennagi haadthini ansatte…. nimma MANASE CD kellde.. nevu ,” hegigittu ?” anthha kelldre.. naanu varnane madalu sahithi alla…eshtt maathra hellballe nanna kannugalu thumbi haridavu…. ee dina naanu bikki bikki attiddene…. Nivu life andere yenu antha thumba arthaisiddira.. But aadre
  Nanu nanna hudugi kallkondavanu… duschatagali (somkigg daily and rarely drinking) sollpa olagadavanu… ondh ebbru frinds ollevru antha mambidde but mosamadibittru … naane doora maadbitte…. Haage thumba olle Friends nan life-li bandru but haage avara career busy aagiddare … ontithana thmba kaadthide… thmba sala yaaru beda ansatte…
  eddrinda heg aache barodu … plese answer me…

 32. ನನ್ನ ಪ್ರಶ್ನೆ ಒಂದೆ ಒಂದು – ಓ ಮನಸೇ ಯಾಕೆ ಬರುತ್ತಿಲ್ಲ…?

 33. Yanku ಹೇಳುತ್ತಾರೆ:

  sir really i am very happy see your kannada blog…. plz countinue it…. best of luck sir….

 34. byatappa.v ಹೇಳುತ್ತಾರೆ:

  sir
  i am your fan. becouse your speach is very very attraction with me.

 35. Maheshkumar. Hiremath ಹೇಳುತ್ತಾರೆ:

  ravi sir ,

  Please start O manase again , It gives lot of encourage to many people.

  Maheshkumar. Hiremath

 36. santosh ju ಹೇಳುತ್ತಾರೆ:

  NANU NIMMA DODDA ABIMANI NIMMA LEKANAVU ESTU ARTHAPURNAVAGIRUTTADE KALEDA 5-6 THINGALINDA NIMMA “HAI BANGALORE patrikeyennu bidade odutiddene………..
  nimma book stall ge visiet koduva aase adare kelasade ottadadinda baralu sadyavaguttilla

 37. ramya ಹೇಳುತ್ತಾರೆ:

  hey fool dont u have other work then cheeting others and interfear in some ones life and writing bad things about actress like sringere puja ,asha lata..so many if we name. if some body does same blame on ur daughters and ur wifes(not wife)..i think u will not mind bcoz u are of that kind only.stop blaming others for no reason.do correct ur self first than try correcting others

 38. RAJU ಹೇಳುತ್ತಾರೆ:

  sir i am big fan u nanage nivu adio madida caset bekagide adu ” o manase”

 39. siddu ಹೇಳುತ್ತಾರೆ:

  hai Ravi sir how r u iam siddu, nanu ondu story writing adu ondu reale love story this is my love story a storiy na ,,film madabeku antha nana drema plz helf me sir yakandre oba baragaran filingas mathoba baragrangae mathra aratha agodu anthe gandhi nagar bage nange yanu gothil nanu oba dircter agabeku antha bangalore bandidane adre a kanasu kanasage uladede ,a story nan kaile etagondu ede gandhi nagar sutihdru obarnu meet madake agalila,
  nana akshara thapa agidli sory,,,
  adake plz helf me sir, nima name helakondu jevan madathane sir,

  inthi nima abhimani,

  Siddu, Hireamatha, bangalore,
  e mail siddhu1932010@gmail.com

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: